
ಪ್ರಜಾವಾಣಿ ವಾರ್ತೆವಿಧಾನಮಂಡಲ
ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಫೆಬ್ರುವರಿ 4ರವರೆಗೆ ನಡೆಯಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಈ ಹಿಂದೆ ಇದೇ 31ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮತ್ತು ವಿಬಿ ಜಿ ರಾಮ್ ಜಿ ಕುರಿತ ಚರ್ಚೆ ನಡೆಯಬೇಕಿರುವುದರಿಂದ ಕಲಾಪವನ್ನು ವಿಸ್ತರಿಸಲು ಸದನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಹೀಗಾಗಿ ಇದೇ 31 (ಶನಿವಾರ) ಕಲಾಪ ನಡೆಯುವುದಿಲ್ಲ. ಫೆ.2ರಂದು ವಂದನಾ ನಿರ್ಣಯದ ಮೇಲೆ ಮುಖ್ಯಮಂತ್ರಿ ಉತ್ತರ ನೀಡಲಿದ್ದಾರೆ. ಫೆ 4ರಂದು ವಿಬಿ ಜಿ ರಾಮ್ ಜಿ ಮಸೂದೆ ಕುರಿತು ಚರ್ಚೆ ಪೂರ್ಣಗೊಳಿಸಿ ನಿರ್ಣಯ ಕೈಗೊಳ್ಳಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.