ADVERTISEMENT

‘ಪ್ರಶಸ್ತಿ, ನಗದು ಬಹುಮಾನ ಹೆಚ್ಚಳಕ್ಕೆ ಪ್ರಸ್ತಾವನೆ’

ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಮಾಹಿತಿ *ವಾರ್ಷಿಕ ಗೌರವ ಪ್ರಶಸ್ರಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 22:16 IST
Last Updated 19 ಆಗಸ್ಟ್ 2022, 22:16 IST

ಬೆಂಗಳೂರು: ‘ನಾಡಿನಲ್ಲಿ 2,500ಕ್ಕೂ ಅಧಿಕ ಕಲಾವಿದರು ಸಕ್ರಿಯರಾಗಿದ್ದಾರೆ. ಆದ್ದರಿಂದ ವಾರ್ಷಿಕ ಪ್ರಶಸ್ತಿಗಳ ಸಂಖ್ಯೆ ಹಾಗೂ ನಗದು ಬಹುಮಾನ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ತಿಳಿಸಿದರು.

ಅಕಾಡೆಮಿಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಸಮಾ ರಂಭದಲ್ಲಿ ಕಲಾವಿದ ರಾದಸುಭಾಶ್‌ ಚಂದ್ರ ಕೆಂಬಾವಿ,ಸ್ಮಿತಾ ಕಾರಿಯಪ್ಪ, ಅನಿರುದ್ಧ ಜೋಶಿ ಮತ್ತು ಬಿ. ದೇವರಾಜ್ ಅವರು ‘2021ನೇ ಸಾಲಿನ ಗೌರವ ಪ್ರಶಸ್ತಿ’ ಸ್ವೀಕರಿಸಿದರು.

ಆರ್‌. ರಾಜ ಮತ್ತುಜಯಕುಮಾರ್‌ ಜಿ. ಅವರು ಗೈರಾಗಿದ್ದರು. ಈ ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಒಳಗೊಂಡಿದೆ.

ADVERTISEMENT

‘ಪ್ರತಿವರ್ಷ ಮೂವರು ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ, ಈ ಸಾಲಿನಲ್ಲಿ 50ನೇ ವಾರ್ಷಿಕ ಕಲಾ ಪ್ರದರ್ಶನದ ಸುವರ್ಣ ಸಂದರ್ಭದ ನೆನಪಿಗಾಗಿ ಈ ಸಂಖ್ಯೆಯನ್ನು ಆರಕ್ಕೆ ಹೆಚ್ಚಿಸಲಾಗಿದೆ. ಕೋವಿಡ್ ನಡುವೆಯೂ ಅಕಾಡೆಮಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದೆ. ಅನ್ಯ ಮೂಲಗಳಿಂದಲೂ ಹಣ ಸಂಗ್ರಹಿಸಿ, ಕರ್ನಾಟಕ ಪ್ರಿಂಟ್ ಬೈನಾಲೆಯಂತಹ ಕಾರ್ಯಕ್ರಮಗಳನ್ನು ನಡೆಸಲಾಗಿದೆ’ ಎಂದು ಡಿ. ಮಹೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.