ADVERTISEMENT

ಕರ್ನಾಟಕ ಲೋಕಸಭಾ ಕ್ಷೇತ್ರ ದರ್ಶನ–2

​ಪ್ರಜಾವಾಣಿ ವಾರ್ತೆ
Published 3 ಮೇ 2019, 11:14 IST
Last Updated 3 ಮೇ 2019, 11:14 IST
   

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಹಿಡಿತದಿಂದ ವಾಪಸು ಪಡೆಯಲು ಕಾಂಗ್ರೆಸ್‌ ಪ್ರಯತ್ನ ನಡೆಸುತ್ತಿದೆ. ಆದರೆ, ಜೆಡಿಎಸ್‌ ಕೂಡ ಕ್ಷೇತ್ರದ ಮೇಲೆ ಕಣ್ಣು ನೆಟ್ಟಿದೆ. ಹೀಗಾಗಿ, ಮೈತ್ರಿ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿ ಯಾರು ಎಂಬ ಗೊಂದಲ ಮುಂದುವರಿದಿದೆ.

2008ರಲ್ಲಿ ಕ್ಷೇತ್ರ ಮರುವಿಂಗಡಣೆ ಕೊಡಗಿನ ಎರಡು ವಿಧಾನಸಭಾಕ್ಷೇತ್ರಗಳನ್ನು ಸೇರಿಸಿಕೊಂಡು ಹೊಸ ಕ್ಷೇತ್ರ ಸೃಷ್ಟಿಯಾಯಿತು. ಹಿಂದೆ ಇದ್ದ ನಾಲ್ಕು ಕ್ಷೇತ್ರಗಳ ‍ಪೈಕಿ ಮೂರು ಚಾಮರಾಜನಗರಕ್ಕೆ, ಒಂದು ಮಂಡ್ಯಕ್ಕೆ ಸೇರಿವೆ.

ಕೋಲಾರ

ADVERTISEMENT

ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮೂರೂ ರಾಜಕೀಯ ಪಕ್ಷಗಳು ಗೆಲುವಿನ ಮಾಯಾ ಜಿಂಕೆ ಬೆನ್ನಟ್ಟಿವೆ.

ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಹಾಗೂ ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಹಾಲಿ ಸಂಸದ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ 1991ರಿಂದ ಸತತ 7 ಬಾರಿ ಜಯ ಗಳಿಸಿದ್ದಾರೆ. ಹೀಗಾಗಿ ಈ ಬಾರಿಯೂ ಅವರೇ ಅಭ್ಯರ್ಥಿ. ಆದರೆ ಜೆಡಿಎಸ್‌ ಸ್ಥಳೀಯ ನಾಯಕರು ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಪಟ್ಟು ಹಿಡಿದಿದ್ದಾರೆ.

ಹಾವೇರಿ

ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಬಿಜೆಪಿಯ ಶಿವಕುಮಾರ್‌ ಉದಾಸಿ ಸತತ ಎರಡು ಬಾರಿ ಗೆದ್ದಿದ್ದು, ಈ ಬಾರಿಯೂ ಅವರೇ ಅಭ್ಯರ್ಥಿ. ಅದಕ್ಕೂ ಮೊದಲು ಕ್ಷೇತ್ರವು ‘ಧಾರವಾಡ ದಕ್ಷಿಣ’ ಎಂದಿತ್ತು. ಇಲ್ಲಿ ಕಾಂಗ್ರೆಸ್‌ 1962ರಿಂದಲೂ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುತ್ತಾ ಬಂದಿತ್ತು. ಆದರೆ, ಸತತ ಮೂರು ಸೋಲಿನಿಂದಾಗಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತೇ ಚರ್ಚೆ ಹೆಚ್ಚಾಗಿದೆ.

ಒಂದೆಡೆ ಮೈತ್ರಿ, ಮತ್ತೊಂದೆಡೆ ಪ್ರಬಲ ನೆಲೆ ಹೊಂದದ ಕಾರಣ ಜೆಡಿಎಸ್ ಸ್ಪರ್ಧೆ ಅನುಮಾನ. ಆದ್ದರಿಂದ ಮತ್ತೊಮ್ಮೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಪೈಪೋಟಿ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.