ADVERTISEMENT

ವೀರಣ್ಣ, ಸಬಿಹಾ ಸೇರಿ ಐವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಗೌರವ ಪ್ರಶಸ್ತಿ’

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಾರ್ಷಿಕ ಪ್ರಶಸ್ತಿಗಳು ಪ್ರಕಟ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 20:46 IST
Last Updated 8 ಮಾರ್ಚ್ 2025, 20:46 IST
<div class="paragraphs"><p>ಸಿ. ವೀರಣ್ಣ</p></div>

ಸಿ. ವೀರಣ್ಣ

   

ಬೆಂಗಳೂರು:  ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ರ ‘ವಾರ್ಷಿಕ ಗೌರವ ಪ್ರಶಸ್ತಿ’ಗೆ ಸಾಹಿತಿಗಳಾದ ಸಿ. ವೀರಣ್ಣ (ಬೆಂಗಳೂರು), ಶ್ರೀರಾಮ ಇಟ್ಟಣ್ಣವರ (ಬಾಗಲಕೋಟೆ), ಜಾಣಗೆರೆ ವೆಂಕಟರಾಮಯ್ಯ (ತುಮಕೂರು), ಎ.ಎಂ. ಮದರಿ (ಕೊಪ್ಪಳ) ಹಾಗೂ ಸಬಿಹಾ ಭೂಮಿಗೌಡ (ಮಂಗಳೂರು) ಆಯ್ಕೆಯಾಗಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ‘ಈ ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಬಹುಮಾನ ಒಳಗೊಂಡಿದೆ’ ಎಂದು ತಿಳಿಸಿದರು. 

ADVERTISEMENT

‘2023ರ ‘ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಎಂ.ಎಸ್. ಶೇಖರ್ (ಮೈಸೂರು), ಜಿ.ಎನ್. ಮೋಹನ್ (ಬೆಂಗಳೂರು), ಟಿ.ಎಸ್. ವಿವೇಕಾನಂದ (ತುಮಕೂರು), ಜಯಶ್ರೀ ಕಂಬಾರ (ಬೆಳಗಾವಿ), ಪ್ರೊ. ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ
(ಧಾರವಾಡ),ಬಾಲಗುರುಮೂರ್ತಿ (ಕೋಲಾರ), ಪ್ರೊ. ಶಿವಗಂಗಾ ರುಮ್ಮಾ (ಕಲಬುರಗಿ), ರೀಟಾ ರೀನಿ  (ಬೆಂಗ
ಳೂರು), ಕಲೀಮ್ ಉಲ್ಲಾ (ಶಿವಮೊಗ್ಗ) ಹಾಗೂ ವೆಂಕಟಗಿರಿ ದಳವಾಯಿ (ಬಳ್ಳಾರಿ) ಅವರನ್ನು ಆಯ್ಕೆ ಮಾಡ ಲಾಗಿದೆ.  ಈ ಪ್ರಶಸ್ತಿಯು ತಲಾ ₹ 25 ಸಾವಿರ ಒಳಗೊಂಡಿದೆ’ ಎಂದರು.

‘2022ರ ಪುಸ್ತಕ ಬಹುಮಾನಕ್ಕೆ ವಿಮರ್ಶಕರ ಅಭಿಪ್ರಾಯ ಆಧರಿಸಿ 18 ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಬಹುಮಾನವು ತಲಾ ₹ 25 ಸಾವಿರ ನಗದು ಬಹುಮಾನ ಒಳಗೊಂಡಿದೆ. 2022ರ ವಿವಿಧ ದತ್ತಿ ಬಹುಮಾನಗಳಿಗೆ ಒಂಬತ್ತು ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿ ಪ್ರದಾನ ಸಮಾರಂಭವು ಇದೇ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.