
ಶಿಲ್ಪಕಲಾ ವೈಭವ
ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2024, 2025ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಪ್ರಕಟಿಸಿದೆ.
ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಗೌರವ ಪ್ರಶಸ್ತಿಗೆ ಹತ್ತು ಶಿಲ್ಪಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ತಲಾ ₹50 ಸಾವಿರ ನಗದು, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ಬೀದರ್ ಅಥವಾ ಚಾಮರಾಜನಗರದಲ್ಲಿ ಸಮಾರಂಭ ಆಯೋಜಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಸಿ.ರಮೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಲ್ಲದೇ, 2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿಗೆ ಹತ್ತು ಶಿಲ್ಪಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ತಲಾ ₹25 ಸಾವಿರ ನಗದು, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದೆ. ಅಕಾಡೆಮಿಯ 19ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ 2025ಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾಂಪ್ರದಾಯಿಕ ಮತ್ತು ಸಮಕಾಲೀನ, ಜಾನಪದ ಶೈಲಿಯ ಕಲಾಕೃತಿಗಳಲ್ಲಿ ಆರು ಶಿಲ್ಪ ಕಲಾಕೃತಿಗಳನ್ನು ಅಕಾಡೆಮಿಯ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
2024ನೇ ಸಾಲಿನ ಗೌರವ ಪ್ರಶಸ್ತಿ: ಎ.ಪಿ.ಶ್ರೀಕಂಠಾಚಾರ್ಯ (ಸಂಪ್ರದಾಯ ಶಿಲ್ಪ)–ದಾವಣಗೆರೆ, ಸಾಯಿನಾಥ ಭೀಮರಾಯಪ್ಪ (ಸಂಪ್ರದಾಯ ಶಿಲ್ಪ)–ಧಾರವಾಡ, ಸೋಮಚಾರಿ (ಸಂಪ್ರದಾಯ ಶಿಲ್ಪ)–ಹಾವೇರಿ, ಎಂ.ಕೆ.ಗಿರೀಶ್ ಕುಮಾರ್ (ಸಮಕಾಲೀನ ಶಿಲ್ಪ)–ವಿಜಯನಗರ
2025ನೇ ಸಾಲಿನ ಗೌರವ ಪ್ರಶಸ್ತಿ: ಕಲ್ಲಣ್ಣ ಸಾಯಬಣ್ಣ ಕಂಬಾರ (ಸಂಪ್ರದಾಯ ಶಿಲ್ಪ)–ಕಲಬುರಗಿ, ರವೀಂದ್ರ ವಿ ಬಡಿಗೇರ (ರಥ ಶಿಲ್ಪ)–ರಾಯಚೂರು, ಯಚ್ಚರಪ್ಪ ನಾಗಲಿಂಗಪ್ಪ ಪತ್ತಾರ (ಸಂಪ್ರದಾಯ ಶಿಲ್ಪ)–ಗದಗ, ಅರುಣ ಬುಕ್ಕಾ ಗುಡಿಗಾರ (ಸಂಪ್ರದಾಯ ಶಿಲ್ಪ)–ಉತ್ತರ ಕನ್ನಡ, ಕೆ.ರಾಘವೇಂದ್ರ (ಸಮಕಾಲೀನ ಶಿಲ್ಪ)–ಮೈಸೂರು
2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ: ಬಸ್ತಿ ಸದಾಶಿವ ಶೆಣೈ (ದಕ್ಷಿಣ ಕನ್ನಡ), ದೇವಿಪ್ರಸಾದ್ ಎಂ.ಮಾಯಾಚಾರ್ಯ (ಬಾಗಲಕೋಟೆ), ಮಂಜುನಾಥ ಡಿ ಬಾರ್ಕಿ (ಹಾವೇರಿ), ರಾಜೇಶ್ ಎಂ.ಪತ್ತಾರ (ಗದಗ), ಆನಂದ ಹಾವನೂರು (ಬೆಳಗಾವಿ), ನವೀನ್ ಕಡ್ಲಾಸ್ಕರ್ (ಧಾರವಾಡ), ಕೆ.ಎನ್.ಕೃಷ್ಣಮೂರ್ತಿ ಆಚಾರ್ (ಚಿತ್ರದುರ್ಗ), ವಿಪಿನ್ ಭದೌರಿಯಾ (ಬೆಂಗಳೂರು), ಸಿ.ಪಿ.ವಿಶ್ವನಾಥ್ (ತುಮಕೂರು), ಎಂ.ಶರಣ್ (ಬೆಂಗಳೂರು ದಕ್ಷಿಣ)
ಶಿಲ್ಪಕಲಾ ಪ್ರದರ್ಶನ ಬಹುಮಾನ ವಿಜೇತರು: ಬಿ.ಬ್ರಹ್ಮಚಾರಿ (ವಿಜಯನಗರ), ಎಲ್.ಪುರುಷೋತ್ತಮ್ (ಶಿವಮೊಗ್ಗ), ಎಸ್.ರಾಘವೇಂದ್ರ (ಶಿವಮೊಗ್ಗ), ಡಿ.ಎಂ.ಪ್ರದೀಪ್ ಕುಮಾರ್ (ದಾವಣಗೆರೆ), ವಿಶ್ವೇಶ್ವರ ಪರ್ಕಳ (ಉಡುಪಿ), ಕೆ.ಎಸ್.ಸ್ವಾತೀಶ್ (ಮಂಡ್ಯ)
ರಾಮ್‌ಸನ್ಸ್ ಕಲಾ ಪ್ರತಿಷ್ಠಾನ ಬಹುಮಾನಕ್ಕೆ ಈರಣ್ಣ (ರಾಯಚೂರು) ಅವರ ಶಿಲ್ಪಕಲಾಕೃತಿ ಆಯ್ಕೆಯಾಗಿದೆ. ಅದೇ ರೀತಿ ವಿಜಯಪುರದ ಮನೋಹರ ಕಾಳಪ್ಪ ಪತ್ತಾರ ದತ್ತಿ ಬಹುಮಾನಕ್ಕೆ ವಾದಿರಾಜ ಎಂ.ಬಡಿಗೇರ (ಕಲಬುರಗಿ), ಉಡುಪಿ ಜಿಲ್ಲೆ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಬಹುಮಾನಕ್ಕೆ ರೂಪ ಖಂಗೋವಿ (ಬೆಂಗಳೂರು), ಪಿ.ಎಸ್.ಕೃಷ್ಣಮೂರ್ತಿ (ಬೆಂಗಳೂರು ದಕ್ಷಿಣ) ಮತ್ತು ಅರೇನಾ ಅನಿಮೇಷನ್ ಮಲ್ಲೇಶ್ವರಂ ಹಾಗೂ ವೇದಾತ್ಮ ಕಾಲೇಜ್ ಆಫ್ ಡಿಸೈನ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್ ಬಹುಮಾನಕ್ಕೆ ಆನಂದ ಬಿಳಗಿ (ಬಾಗಲಕೋಟೆ) ಅವರ ಶಿಲ್ಪಕಲಾಕೃತಿ ಆಯ್ಕೆಯಾಗಿದೆ.
ಎ.ಪಿ.ಶ್ರೀಕಂಠಾಚಾರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.