ADVERTISEMENT

ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ವಿಶ್ವಾಸ ಮತಯಾಚನೆ; ಚರ್ಚೆಗೆ ಗ್ರಾಸವಾದ ಸ್ಪೀಕರ್‌!

ಕರ್ನಾಟಕ ವಿಧಾನಸಭೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 5:22 IST
Last Updated 23 ಜುಲೈ 2019, 5:22 IST
ಸ್ಪೀಕರ್‌ಗಳು– ಚಿತ್ರ ಕೃಪೆ: ಟ್ವಿಟರ್‌
ಸ್ಪೀಕರ್‌ಗಳು– ಚಿತ್ರ ಕೃಪೆ: ಟ್ವಿಟರ್‌    

ಬೆಂಗಳೂರು: ವಿಶ್ವಾಸಮತ ಯಾಚನೆಗಾಗಿ ಗುರುವಾರ ನಡೆಯುತ್ತಿರುವ ಕಲಾಪದಲ್ಲಿ ಸಂವಿಧಾನಾತ್ಮಕ ಹಕ್ಕು ಮತ್ತು ಸುಪ್ರೀಂ ಕೋರ್ಟ್‌ ತೀರ್ಪುನ ಬಗೆಗಿನ ಚರ್ಚೆ ಮುನ್ನೆಲೆಗೆ ಬಂದಿದೆ. ಗೊಂದಲದ ಗೂಡಾಗಿರುವ ರಾಜ್ಯ ವಿಧಾನಸಭೆ ಕಲಾಪ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತು ಮುಂದುವರಿಸದೆ ಮೌನಕ್ಕೆ ಶರಣಾಗಿದ್ದರೆ, ಕಾಂಗ್ರೆಸ್‌ ಮುಖಂಡರು ವಿಪ್‌ ಕುರಿತ ಗೊಂದಲ ನಿವಾರಣೆಯ ಚರ್ಚೆಗೆ ಅಂಟಿಕೊಂಡಿದ್ದಾರೆ. ಬಿಜೆಪಿ ಪಾಳಯ ವಿಶ್ವಸಮತ ಯಾಚನೆ ಪ್ರಕ್ರಿಯೆ ಮುಂದುವರಿಸುವಂತೆ ಒತ್ತಾಯಿಸುತ್ತಿದೆ. ಈ ನಡುವೆ ರಾಜ್ಯಪಾಲರು, ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಭಾಧ್ಯಕ್ಷರಿಗೆ ಸಂದೇಶ ರವಾನಿಸಿದ್ದರು.

ಈಗಾಗಲೇ ನಾಲ್ಕುಬಾರಿ ಕಲಾಪ ಮುಂದೂಡಿಕೆಯಾಗಿದ್ದು, ನಾಳೆಗೆ ಕಲಾಪ ಮುಂದೂಡಲಾಗಿದೆ. ಆದರೆ,ರಾತ್ರಿ 12 ಆದರೂ ಸರಿಯೇ ಇಂದೇ ವಿಶ್ವಾಸಮತ ಯಾಚನೆ ನಡೆಯಲಿ ಎಂದು ಬಿ.ಎಸ್‌.ಯಡಿಯೂರಪ್ಪ ಪಟ್ಟು ಹಿಡಿದಿದ್ದರು. ರಾತ್ರಿ ವಿಧಾನಸಭೆಯಲ್ಲಿಯೇ ಉಳಿದುಕೊಳ್ಳಲು ಬಿಜೆಪಿ ತೀರ್ಮಾನಿಸಿದೆ. ಈ ಎಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

#KarnatakaFloorTest ಮತ್ತು #KarnatakaTrustVote ಹ್ಯಾಷ್‌ಟ್ಯಾಗ್‌ಗಳು ಬೆಳಗಿನಿಂದ ಟ್ವಿಟರ್‌ ಟ್ರೆಂಡಿಗ್‌ನಲ್ಲಿದೆ. ರಾಜ್ಯ ರಾಜಕಾರಣದ ಕುರಿತು ಕೆಲವು ವ್ಯಂಗ್ಯದ ಟ್ವೀಟ್‌ಗಳು, ಪ್ರಶ್ನೆಗಳು, ಅಭಿಪ್ರಾಯಗಳು ಟ್ವಿಟರ್‌ನಲ್ಲಿ ತುಂಬಿವೆ.

‘ಯಡಿಯೂರಪ್ಪ ಸೂಪರ್‌ ಓವರ್‌ಗೆ ಸಜ್ಜಾಗುತ್ತಿದ್ದಾರೆ, ವಿಶ್ವಾಸಮತ ಯಾಚನೆ ನಡೆಯುವ ನೆಲೆ ಕುದಿಯುತ್ತಿದೆ, ಸ್ಪೀಕರ್ ಕೆಟ್ಟೋಗಿದೆ,..’ ಹೀಗೆ ರಾಜಕಾರಣಿಗಳ ಬಗ್ಗೆ, ಸ್ಪೀಕರ್‌ ನಡೆಯ ಕುರಿತು ಹಾಗೂ ಅಧಿಕಾರಿದ ಹಪಾಹಪಿಯನ್ನು ಮೂದಲಿಸಿ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.