ADVERTISEMENT

ರಾಜ್ಯದಲ್ಲಿ ಕುಸಿದ ತಾಪಮಾನ: ಮಲೆನಾಡಿನಲ್ಲಿ 2 ದಿನ ಮಳೆ ಸಾಧ್ಯತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜನವರಿ 2026, 5:57 IST
Last Updated 7 ಜನವರಿ 2026, 5:57 IST
ಚಿಕ್ಕಮಗಳೂರು ನಗರದ ಸಂತೆ ಮೈದಾನ ಆಟೊ ನಿಲ್ದಾಣದಲ್ಲಿ ಚಾಲಕರು ಚಳಿ ಕಾಯಿಸುತ್ತಿರುವುದು
ಚಿಕ್ಕಮಗಳೂರು ನಗರದ ಸಂತೆ ಮೈದಾನ ಆಟೊ ನಿಲ್ದಾಣದಲ್ಲಿ ಚಾಲಕರು ಚಳಿ ಕಾಯಿಸುತ್ತಿರುವುದು   

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಹವಾಮಾನದಲ್ಲಿ ಬದಲಾವಣೆ ಕಂಡುಬರುತ್ತಿದ್ದು, ಬೀದರ್‌, ವಿಜಯಪುರ ಸೇರಿದಂತೆ ಉತ್ತರ ಕರ್ನಾಟದಲ್ಲಿ ತಾಪಮಾನ ಕನಿಷ್ಠಮಟ್ಟಕ್ಕೆ ಕುಸಿದಿದೆ.

ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ಜನವರಿ 9 ಮತ್ತು 10 ರಂದು ಮಳೆಯ ಮುನ್ಸೂಚನೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಮುನ್ಸೂಚನೆ ನೀಡಿದೆ. 

ಮುಂದಿನ 7 ದಿನಗಳ ಕಾಲ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯುವ ಸಾಧ್ಯತೆಯಿದ್ದು, ಮುಂಜಾನೆ ಚಳಿ ಹಾಗೂ ಅಲ್ಲಲ್ಲಿ ಮಂಜಿನ ವಾತಾವರಣ ಇರುವ ಸಾಧ್ಯತೆಯಿದೆ. ಕನಿಷ್ಠ ತಾಪಮಾನ ಸಾಮಾನ್ಯ ಹಾಗೂ ಸಾಮಾನ್ಯಕಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುವ ಸಾಧ್ಯತೆಯಿದೆ ಎಂದೂ ತಿಳಿಸಿದೆ. 

ADVERTISEMENT

ಜಿಲ್ಲಾವಾರು ತಾಪಮಾನ (ಡಿಗ್ರಿ ಸೆಲ್ಸಿಯಸ್‌ಗಳಲ್ಲಿ)

ಬೀದರ್‌ (7.2)

ವಿಜಯಪುರ (8.2)

ಬಾಗಲಕೋಟೆ (8.8)

ಕೊಪ್ಪಳ (9.4)

ಧಾರವಾಡ (9.7)

ಗದಗ (9.7)

ಬೆಳಗಾವಿ (9.8)

ಕಲಬುರಗಿ  (10)

ಉತ್ತರ ಕನ್ನಡ (10.3) 

ವಿಜಯನಗರ (10.4)

ರಾಯಚೂರು (11.6)

ಹಾವೇರಿ (11.6)

ಶಿವಮೊಗ್ಗ (11.8)

ಯಾದಗಿರಿ(11.8)

ಚಿಕ್ಕಮಗಳೂರು (12.4)

ದಾವಣಗೆರೆ (12.5)

ಕೋಲಾರ (12.9)

ಬಳ್ಳಾರಿ (13)

ಚಿತ್ರದುರ್ಗ (13)

ಚಿಕ್ಕಬಳ್ಳಾಪುರ (13.5)

ತುಮಕೂರು (13.6)

ಮೈಸೂರು (14)

ಬೆಂಗಳೂರು ಗ್ರಾ. (14.6)

ಹಾಸನ (15.1)

ಚಾಮರಾಜನಗರ (15.3)

ಬೆಂಗಳೂರು ನಗರ (15.4)

ಕೊಡಗು (15.7)

ಮಂಡ್ಯ (15.8)

ಬೆಂಗಳೂರು ದಕ್ಷಿಣ (16.5)

ದಕ್ಷಿಣ ಕನ್ನಡ (19)