ಕೆಇಎ
ಬೆಂಗಳೂರು: ಬಿಪಿಟಿ, ಬಿಪಿಒ, ಎಎಚ್ಎಸ್ ಕೋರ್ಸ್‌ಗಳ ಪ್ರವೇಶಕ್ಕೆ ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ರ‍್ಯಾಂಕ್ ಪ್ರಕಟಿಸಿದೆ.
‘ಯುಜಿ–ಸಿಇಟಿ ಬರೆದಿದ್ದ ಎಲ್ಲ ಅಭ್ಯರ್ಥಿಗಳಿಗೂ ರ‍್ಯಾಂಕ್ ನೀಡಲಾಗಿದೆ. ಬಿಪಿಟಿ ಮತ್ತು ಎಎಚ್ಎಸ್ ಕೋರ್ಸ್‌ಗಳಿಗೆ ವಿಜ್ಞಾನ ಮತ್ತು ಬಿಪಿಒ ಕೋರ್ಸ್‌ಗಳ ಪ್ರವೇಶಕ್ಕೆ ಕಲಾ ಮತ್ತು ವಾಣಿಜ್ಯ ವಿಷಯಗಳಲ್ಲಿ ಪಿಯುಸಿ ಶಿಕ್ಷಣ ಮುಗಿಸಿರುವವರು ಕೂಡ ಅರ್ಹರು’ ಎಂದು ಕೆಎಇ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಒಂದು ಗಂಟೆಯಲ್ಲಿ ಫಲಿತಾಂಶ: ‘ಡಿ–ಸಿಇಟಿ–2025 ಪರೀಕ್ಷೆ ಬರೆದಿದ್ದ ಹೊರನಾಡು, ಗಡಿನಾಡು ಕನ್ನಡಿಗರ ಸಲುವಾಗಿ ಬುಧವಾರ (ಜೂನ್ 18) ಇಲ್ಲಿನ ಕೆಇಎ ಕಚೇರಿಯಲ್ಲಿ ಪರೀಕ್ಷೆ ನಡೆದು ಒಂದು ಗಂಟೆಯಲ್ಲೇ ಫಲಿತಾಂಶ ಕೂಡ ನೀಡಲಾಗಿದೆ. ಪರೀಕ್ಷೆ ತೆಗೆದುಕೊಂಡಿದ್ದ 27 ಅಭ್ಯರ್ಥಿಗಳ ಪೈಕಿ ಪರೀಕ್ಷೆಗೆ ಹಾಜರಾಗಿದ್ದು ಕೇವಲ ಏಳು ಮಂದಿ. ಅವರಲ್ಲಿ ಒಬ್ಬರು ಅನುತ್ತೀರ್ಣರಾಗಿದ್ದು ಉಳಿದ ಆರು ಮಂದಿ ಅರ್ಹರಾಗಿದ್ದಾರೆ’ ಎಂದು ಪ್ರಸನ್ನ ತಿಳಿಸಿದ್ದಾರೆ.
ಒಟ್ಟು 50 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 12 ಅಂಕ ಪಡೆದವರು ಮಾತ್ರ ಈ ಕೋಟಾದಡಿ ಸೀಟು ಪಡೆಯಲು ಅರ್ಹರಾಗುತ್ತಾರೆ. ಆದರೆ ಏಳು ಮಂದಿಯಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ 10 ಅಂಕ ಪಡೆದು ಅನರ್ಹರಾಗಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.