ADVERTISEMENT

ಶಂಕಿತ ಮಂಗನ ಕಾಯಿಲೆಗೆ ಮತ್ತೊಬ್ಬರು ಬಲಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 18:03 IST
Last Updated 7 ಫೆಬ್ರುವರಿ 2019, 18:03 IST

ಕಾರ್ಗಲ್‌: ಶಂಕಿತ ಮಂಗನ ಕಾಯಿಲೆಯಿಂದಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳಕಾರುಕೃಷ್ಣಪ್ಪ ಮೃತಪಟ್ಟಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಅವರನ್ನು ಗುರುವಾರ ಮೆಗ್ಗಾನ್‌ ಆಸ್ಪತ್ರೆಗೆ ಕರೆತರುವಾಗಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಐದು ದಿನಗಳಹಿಂದೆ ಅವರಿಗೆ ಮಂಗನಕಾಯಿಲೆ ಜ್ವರಕಾಣಿಸಿಕೊಂಡಿತ್ತು. ಕಾರ್ಗಲ್‌ನಖಾಸಗಿ ಕ್ಲಿನಿಕ್‌ನಲ್ಲಿಚಿಕಿತ್ಸೆ ಪಡೆದಿದ್ದರು. ಹೆಚ್ಚಿನ ಚಿಕಿತ್ಸೆ ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ಮೃತ ಕೃಷ್ಣಪ್ಪ ಅವರು ಕುಂದಾಪುರಮೂಲದವರು.ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು. ಕಾರ್ಗಲ್ ಸಮೀಪದ ಕುಳಕಾರು ಗ್ರಾಮದಲ್ಲಿ ವಾಸವಾಗಿದ್ದರು.

ಹೃದಯಾಘಾತ: 50 ವರ್ಷದ ಕೃಷ್ಣಪ್ಪ ಅವರಿಗೆಹೃದಯಾಘಾತವಾಗಿರುವ ಸಾಧ್ಯತೆ ಇದೆ. ಮಂಗನಕಾಯಿಲೆ ವೈರಸ್‌ ತಗುಲಿದವರುಹಲವು ಹಂತಗಳ ಸಮಸ್ಯೆ ಎದುರಿಸಿದ ನಂತರ ಮೃತಪಡುತ್ತಾರೆ. ಕೃಷ್ಣಪ್ಪ ಅವರು ದಿಢೀರ್ ಮೃತಪಟ್ಟಿದ್ದಾರೆ. ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಕಾರಣ ಖಚಿತವಾಗಲಿದೆ ಎಂದು ಡಿಎಚ್‌ಒ ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.