ADVERTISEMENT

ಕೆಐಎಯಿಂದ 3.33 ಕೋಟಿ ಮಂದಿ ಪ್ರಯಾಣ

ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 19:41 IST
Last Updated 22 ಏಪ್ರಿಲ್ 2019, 19:41 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ   

ಬೆಂಗಳೂರು:ಕೆಂಪೇಗೌಡಅಂತರರಾಷ್ಟ್ರೀಯವಿಮಾನ ನಿಲ್ದಾಣದಿಂದ (ಕೆಐಎ) 2018–19ರಲ್ಲಿ 3.33ಕೋಟಿ ಮಂದಿ ಪ್ರಯಾಣಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಯಾಣಿಕರಸಂಖ್ಯೆಯಲ್ಲಿಶೇ 23.8ರಷ್ಟು ಹೆಚ್ಚಳವಾಗಿದೆ.

ನಿಲ್ದಾಣದ ವಾರ್ಷಿಕ ಸಾರಿಗೆ ವರದಿಯನ್ನು ಸೋಮವಾರ ಬಿಡುಗಡೆ ಮಾಡಲಾಯಿತು.

ದೇಶಿಪ್ರಯಾಣಿಕರಸಂಖ್ಯೆಯಲ್ಲಿಶೇ 24.8ರಷ್ಟು ಹೆಚ್ಚಳವಾಗಿದ್ದರೆ, ವಿದೇಶಿಪ್ರಯಾಣಿಕರ ಸಂಖ್ಯೆಯಲ್ಲಿಶೇ 17.5ರಷ್ಟು ಏರಿಕೆಯಾಗಿದೆ.

ADVERTISEMENT

2019ರ ಜ.20ರಂದುಒಂದೇ ದಿನದಲ್ಲಿ 109,174 ಮಂದಿ ಪ್ರಯಾಣಿಸಿದ್ದು, ಇದು ವರ್ಷದ ಗರಿಷ್ಠ ಸಂಖ್ಯೆಯಾಗಿದೆ. ಜ.11ರಂದುಹೆಚ್ಚು ಅಂದರೆ, 750 ವಿಮಾನಗಳು ಹಾರಾಟ ನಡೆಸಿವೆ.ಕಾರ್ಗೊ ಸೇವೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಕಳೆದವರ್ಷಕ್ಕೆ ಹೋಲಿಸಿದರೆ ಶೇ 11ರಷ್ಟು ಹೆಚ್ಚಳವಾಗಿದೆ. ಒಟ್ಟು3,86,780 ಮೆಟ್ರಿಕ್‌ ಟನ್‌ ಸರಕು ಸಾಗಣೆ ಮಾಡಲಾಗಿದೆ. 2017–18ರಲ್ಲಿ ಒಂದು ವರ್ಷದಲ್ಲಿ 3,48,403 ಮೆಟ್ರಿಕ್‌ ಟನ್‌ ಸರಕು ಸಾಗಿಸಲಾಗಿತ್ತು.

ಪ್ರಯಾಣಿಕರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್) ಸಂಸ್ಥೆಯು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.