ADVERTISEMENT

ಕಿದ್ವಾಯಿ: ಗರ್ಭಕಂಠ ಕ್ಯಾನ್ಸರ್‌ಗೆ ಉಚಿತ ತಪಾಸಣೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 19:19 IST
Last Updated 5 ನವೆಂಬರ್ 2018, 19:19 IST
ಡಾ.ಸಿ.ರಾಮಚಂದ್ರ
ಡಾ.ಸಿ.ರಾಮಚಂದ್ರ   

ಬೆಂಗಳೂರು: ನಗರದ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ನವೆಂಬರ್‌ 5 ರಿಂದ 30ರವರೆಗೆ ರಾಜ್ಯದ ಮಹಿಳೆಯರು ಗರ್ಭಕಂಠ ಕ್ಯಾನ್ಸರ್‌ ತಪಾಸಣೆಯನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಡಾ. ಸಿ.ರಾಮಚಂದ್ರ, ‘ನವೆಂಬರ್‌ ತಿಂಗಳಿನಲ್ಲಿ ಗರ್ಭಕಂಠ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇದರ ಅಂಗವಾಗಿ ಉಚಿತವಾಗಿ ತಪಾಸಣೆ ನಡೆಸುತ್ತೇವೆ. ರಾಜ್ಯದಲ್ಲಿ ಪ್ರತಿ ವರ್ಷ 850 ಮಂದಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಕಿದ್ವಾಯಿ ಸಂಸ್ಥೆಯಲ್ಲಿ 150ಕ್ಕೂ ಹೆಚ್ಚು ಮಂದಿ ಚಿಕಿತ್ಸೆಗೆ ಬರುತ್ತಿದ್ದಾರೆ’ ಎಂದರು.

‘ಗರ್ಭಕಂಠ ಕ್ಯಾನ್ಸರ್ ಪತ್ತೆ ಮಾಡಲು ಎಚ್‌ಪಿವಿ (ಹ್ಯೂಮನ್‌ ಪ್ಯಾಲಿಲೋಮಾ ವೈರಸ್‌) ಹಾಗೂ ಪ್ಯಾಪ್ಸಿಮಿಯಾರ್‌ ಮಾಡಬೇಕಾಗುತ್ತದೆ. ಈ ಎರಡೂ ವಿಧಾನಗಳಿಗೆ ₹ 4 ಸಾವಿರ ಖರ್ಚಾಗಲಿದೆ. ಆದರೆ ಕಿದ್ವಾಯಿಯಲ್ಲಿ ಒಂದು ತಿಂಗಳು ಉಚಿತವಾಗಿ ತಪಾಸಣೆ ಮಾಡುವ ಮೂಲಕ ಸಾಕಷ್ಟು ರೋಗಿಗಳಿಗೆ ನೆರವಾಗುವ ಗುರಿ ಹೊಂದಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.