ADVERTISEMENT

ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 13:50 IST
Last Updated 27 ಜನವರಿ 2020, 13:50 IST
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸೋಮವಾರ ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಉರಗ ತಜ್ಞ ಶರತ್ ಪ್ರದರ್ಶಿಸಿದರು
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸೋಮವಾರ ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಉರಗ ತಜ್ಞ ಶರತ್ ಪ್ರದರ್ಶಿಸಿದರು   

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಸುಳುಗೋಡುವಿನಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪವೊಂದನ್ನು ಉರಗ ತಜ್ಞ ಶರತ್‌ ಸೆರೆ ಹಿಡಿದಿದ್ದಾರೆ.

ಜಯ ಅವರ ತೋಟದ ತಾಳೆ ಮರದಲ್ಲಿ 12 ಅಡಿ ಉದ್ದ, 17 ಕೆ.ಜಿ ತೂಕದ ಭಾರಿ ಗಾತ್ರದ ಕಾಳಿಂಗ ಸರ್ಪ ಇತ್ತು. ಅದನ್ನು ಶರತ್ ಒಂದು ಗಂಟೆ ಪ್ರಯತ್ನದಿಂದ ಹಾವನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಸೆರೆ ಹಿಡಿದ ಅಪರೂಪದ ಕಾಳಿಂಗ ಸರ್ಪವನ್ನು ಶರತ್ ಅವರು ಸೋಮವಾರ ನಗರದ ಗಾಂಧಿ ಮೈದಾನದಲ್ಲಿ ಪ್ರದರ್ಶಿಸಿದರು.

ADVERTISEMENT

‘ಹಾವು ಕಂಡರೆ ಕೊಲ್ಲಬೇಡಿ. ಹಾವುಗಳ ರಕ್ಷಣೆಗಾಗಿ ಮಾಹಿತಿ ನೀಡಿದರೆ ಹಾವಿನ ಜೀವ ಉಳಿಸುತ್ತೇವೆ. ಈವರೆಗೆ 3 ಸಾವಿರಕ್ಕೂ ಹೆಚ್ಚು ಹಾವುಗಳನ್ನುರಕ್ಷಿಸಿ ದಟ್ಟ ಕಾಡಿಗೆ ಬಿಟ್ಟಿದ್ದೇವೆ. 23ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನೇ ರಕ್ಷಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.