ಬೆಂಗಳೂರು: ‘2028ರಲ್ಲಿ ಡಿ.ಕೆ. ಶಿವಕುಮಾರ್ ಅವರ ಸರ್ಕಾರ ಬರಲಿ. ಅವರು ಮುಖ್ಯಮಂತ್ರಿ ಯಾಕೆ ಪ್ರಧಾನ ಮಂತ್ರಿ ಬೇಕಾದರೂ ಆಗಲಿ. ಯಾರು ಬೇಡ ಅನ್ನುತ್ತಾರೆ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
‘2028ಕ್ಕೆ ಡಿಕೆ ಸರ್ಕಾರ ತನ್ನಿ’ ಎಂದು ಶಿವಕುಮಾರ್ ನೀಡಿರುವ ಹೇಳಿಕೆಯ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ರಾಜಣ್ಣ, ‘ಪಕ್ಷದ ನಾಯಕತ್ವ ಯಾರೇ ವಹಿಸಿದ್ದರೂ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುವುದು ಹೈಕಮಾಂಡ್’ ಎಂದರು.
‘ಅಧಿಕಾರಕ್ಕೆ ಬರಬೇಕಾದರೆ ಬಹುಮತ ಬೇಕು. ಅದನ್ನು ಪಡೆಯುವುದು ಸಾಮೂಹಿಕ ನಾಯಕತ್ವದ ಹೊಣೆ. ಸರ್ಕಾರ ರಚಿಸಲು ಬೇಕಿರುವಷ್ಟು ನಂಬರ್‌ಗಳು ಸಿಕ್ಕರೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.