ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2020ನೇ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಿದ್ದು, ಕುಮಟಾದ ಅರುಣ್ ಸುಬ್ರಾವ್ ಉಭಯಕರ (ಸಾಹಿತ್ಯ), ಪುತ್ತೂರಿನ ಪಾಂಡುರಂಗ ನಾಯಕ್ (ಕಲೆ) ಹಾಗೂ ಯಲ್ಲಾಪುರದ ಲಕ್ಷ್ಮಿ ಕೃಷ್ಣ ಸಿದ್ದಿ (ಜಾನಪದ) ಅವರು ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿಯು ₹ 50 ಸಾವಿರ ನಗದು, ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದೆ.
ಮಂಗಳೂರಿನ ಪ್ರೇಮ್ ಮೊರಾಸ್ ಅವರ ‘ಏಕ್ ಮೂಟ್ ಪಾವ್ಲ್ಯೊ’ ಕವನ ಸಂಕಲನ, ಉಡುಪಿಯ ಮೊನಿಕಾ ಡೆಸಾ ಮಥಾಯಸ್ ಅವರ ‘ನವಿ ದಿಶಾ’ ಸಣ್ಣಕಥೆ ಮತ್ತು ಪೆರ್ಮುದೆಯ ಸ್ಟೀವನ್ ಕ್ವಾಡ್ರಸ್ ಅವರ ‘ಸುಗಂಧು ಸ್ವಾಸ್’ ಲೇಖನವು ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿವೆ. ಈ ಪ್ರಶಸ್ತಿಯು ₹ 25 ಸಾವಿರ ನಗದು, ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದೆ ಎಂದು ಅಕಾಡೆಮಿಯ ಅಧ್ಯಕ್ಷ ಡಾ.ಕೆ. ಜಗದೀಶ್ ಪೈ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.