ADVERTISEMENT

ಕೆ–ಸೆಟ್‌: ಬರೆದವರು 80,758, ಪಾಸಾಗಿದ್ದು 5,627

ಶೀಘ್ರ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 20:03 IST
Last Updated 27 ಮಾರ್ಚ್ 2019, 20:03 IST
ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು– ಸಾಂದರ್ಭಿಕ ಚಿತ್ರ
ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು– ಸಾಂದರ್ಭಿಕ ಚಿತ್ರ   

ಮೈಸೂರು: ಮೈಸೂರು ವಿಶ್ವವಿದ್ಯಾಲಯ 2018ರ ಡಿಸೆಂಬರ್‌ನಲ್ಲಿ ನಡೆಸಿದ ಕರ್ನಾಟಕ– ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯ (ಕೆ–ಸೆಟ್) ಫಲಿತಾಂಶ ಪ್ರಕಟಿಸಿದ್ದು, 5,627 ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಪಡೆದುಕೊಂಡಿದ್ದಾರೆ.

ಪರೀಕ್ಷೆಗೆ ಹಾಜರಾಗಿದ್ದ 80,758 ಅಭ್ಯರ್ಥಿಗಳ ಪೈಕಿ 3,154 ಪುರುಷರು ಹಾಗೂ 2,473 ಮಹಿಳೆಯರು ತೇರ್ಗಡೆ ಆಗಿದ್ದಾರೆ. ರಾಜ್ಯದ 11 ಕೇಂದ್ರಗಳಲ್ಲಿ 39 ವಿಷಯಗಳಿಗೆ ಪರೀಕ್ಷೆ ನಡೆಸಲಾಗಿತ್ತು. kset.uni-mysore.ac.in ವೆಬ್‌ಸೈಟ್‌ನಲ್ಲಿ ಸದ್ಯದಲ್ಲೇ ಫಲಿತಾಂಶ ಲಭ್ಯವಾಗಲಿದೆ ಎಂದು ಕೆ–ಸೆಟ್ ಸಂಯೋಜಕ ಪ್ರೊ.ಎಚ್‌.ರಾಜಶೇಖರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT