ADVERTISEMENT

ಮೂರು ವರ್ಷಕ್ಕೆ ಪದೋನ್ನತಿ; ಇತಿಹಾಸದಲ್ಲೇ ಮೊದಲು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 16:07 IST
Last Updated 23 ಫೆಬ್ರುವರಿ 2021, 16:07 IST
ಹೆಡ್‌ ಕಾನ್‌ಸ್ಟೆಬಲ್ ಹುದ್ದೆಗೆ ಪದೋನ್ನತಿ ಪಡೆದ ಮಂಜುಳಾ ಹುನಗುಂಡಿ ಅವರಿಗೆ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್ ಅವರು ಬ್ಯಾಡ್ಜ್‌ ಹಾಕಿದರು
ಹೆಡ್‌ ಕಾನ್‌ಸ್ಟೆಬಲ್ ಹುದ್ದೆಗೆ ಪದೋನ್ನತಿ ಪಡೆದ ಮಂಜುಳಾ ಹುನಗುಂಡಿ ಅವರಿಗೆ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್ ಅವರು ಬ್ಯಾಡ್ಜ್‌ ಹಾಕಿದರು   

ಬೆಂಗಳೂರು: ಕಾನ್‌ಸ್ಟೆಬಲ್‌ ಆಗಿ ಕೇವಲ ಮೂರು ವರ್ಷ ನಾಲ್ಕು ತಿಂಗಳು ಸೇವಾವಧಿ ಪೂರ್ಣಗೊಳಿಸಿದ ಮಂಜುಳಾ ಹುನಗುಂಡಿ ಸೇರಿದಂತೆ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) 72 ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ, ಹೆಡ್‌ ಕಾನ್‌ಸ್ಟೆಬಲ್‌ ಆಗಿ ಪದೋನ್ನತಿ ನೀಡಲಾಗಿದೆ.

‘ಮೂರು ವರ್ಷ ನಾಲ್ಕು ತಿಂಗಳಿಗೆ ಪದೋನ್ನತಿ ನೀಡಿರುವುದು ಪೊಲೀಸ್ ಇಲಾಖೆ ಇತಿಹಾಸದಲ್ಲೇ ಮೊದಲು’ ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮರ್ ತಿಳಿಸಿದ್ದಾರೆ.

‘ಕೆಎಸ್‌ಆರ್‌ಪಿ 4ನೇ ಬೆಟಾಲಿಯನ್‌ ಕಾನ್‌ಸ್ಟೆಬಲ್‌ಗಳಾದ ರಂಜಿತಾ ಹಾಗೂ ಎಚ್‌.ಆರ್. ಅನಿತಾ ಅವರಿಗೆ 24 ವರ್ಷ ಸೇವಾವಧಿ ನಂತರ ಪದೋನ್ನತಿ ನೀಡಲಾಗಿದೆ. ಇದರ ಜೊತೆಗೆ, ಮೂರು ವರ್ಷ ಆರು ತಿಂಗಳಿಗಿಂತ ಹೆಚ್ಚಿನ ಸೇವಾವಧಿಯುಳ್ಳ 11 ಹಾಗೂ ಐದು ವರ್ಷ ಸೇವಾವಧಿಯುಳ್ಳ 34 ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಪದೋನ್ನತಿ ನೀಡಲಾಗಿದೆ’ ಎಂದೂ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.