ADVERTISEMENT

ದಸರಾ ಹಬ್ಬ: ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ಪ್ರಯಾಣ ದರ ಹೆಚ್ಚಳ!

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 15:59 IST
Last Updated 29 ಸೆಪ್ಟೆಂಬರ್ 2025, 15:59 IST
ಕೆಎಸ್‌ಆರ್‌ಟಿಸಿ ಬಸ್
ಕೆಎಸ್‌ಆರ್‌ಟಿಸಿ ಬಸ್   

ಬೆಂಗಳೂರು: ದಸರಾ, ದೀಪಾವಳಿ ಸಮಯದಲ್ಲಿ ವಿಶೇಷ ಬಸ್‌ಗಳ ಪ್ರಯಾಣ ದರವನ್ನು ಶೇ 10ರವರೆಗೆ ಹೆಚ್ಚಳ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. 

ವಿಶೇಷ ದಿನ, ಜಾತ್ರೆ, ಹಬ್ಬಗಳ ಸಮಯದಲ್ಲಿ ಸಂಚರಿಸುವ ವಿಶೇಷ ಬಸ್‌ಗಳ ಪ್ರಯಾಣ ದರಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಅವಕಾಶವಿರುತ್ತದೆ. ಈ ದಿನಗಳಲ್ಲಿ ಏಕಮುಖವಾಗಿ ಜನಸಂಚಾರ ಇರುತ್ತದೆ. ವಾಪಸ್‌ ಬರುವಾಗ ಪ್ರಯಾಣಿಕರ ಪ್ರಮಾಣ ಕಡಿಮೆ ಇರುತ್ತದೆ. ವಿಶೇಷ ವಾಹನಗಳನ್ನು ಇತರೇ ವಿಭಾಗಗಳಿಂದ ಪಡೆದು ಅಗತ್ಯ ಇರುವ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುವುದರಿಂದ ವೆಚ್ಚ ಹೆಚ್ಚಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಅದರಂತೆ, ಈ ಬಾರಿ ದಸರಾ ಹಬ್ಬದ ಅವಧಿಯಲ್ಲಿ ಬೆಂಗಳೂರು-ಮೈಸೂರು ಮಾರ್ಗದ ವೇಗದೂತ, ತಡೆರಹಿತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಕ್ರಮವಾಗಿ ₹20 ಹಾಗೂ ₹30 ದರ ಹೆಚ್ಚಿಸಲಾಗಿದೆ. ಈ ರೀತಿ ವಿಶೇಷ ದಿನಗಳಲ್ಲಿ ವಿಶೇಷ ಬಸ್‌ಗಳ ಪ್ರಯಾಣ ದರ ಹೆಚ್ಚಿಸುವ ವ್ಯವಸ್ಥೆ ಎರಡು ದಶಕಗಳಿಂದ ಇದೆ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.