ADVERTISEMENT

ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 13:43 IST
Last Updated 10 ಏಪ್ರಿಲ್ 2021, 13:43 IST
ರವಿಶಂಕರ್‌
ರವಿಶಂಕರ್‌   

ಮಳವಳ್ಳಿ (ಮಂಡ್ಯ ಜಿಲ್ಲೆ): ಕರ್ತವ್ಯಕ್ಕೆ ಹಾಜರಾಗುವಂತೆ ಕರೆ ಮಾಡುತ್ತಿದ್ದ ಸಾರಿಗೆ ಸಂಸ್ಥೆ ಡಿಪೊ ವ್ಯವಸ್ಥಾಪಕರ ಒತ್ತಡಕ್ಕೆ ಹೆದರಿದ ಬಸ್‌ ಚಾಲಕರೊಬ್ಬರು ಮಳವಳ್ಳಿ ಡಿಪೊ ಹಿಂಭಾಗದ ಖಾಲಿ ಜಾಗದಲ್ಲಿ ವಿಷ ಸೇವಿಸಿ ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಚಾಲಕ ಎಂ.ಪಿ.ರವಿಶಂಕರ್ ಆತ್ಮಹತ್ಯೆಗೆ ಯತ್ನಿಸಿದವರು. ಅಸ್ವಸ್ಥರಾಗಿದ್ದ ಅವರನ್ನು ಮಳವಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕರ್ತವ್ಯಕ್ಕೆ ಹಾಜರಾಗದ ನಾಲ್ವರು ಸಿಬ್ಬಂದಿಯನ್ನು ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯಿಂದಲೇ ವರ್ಗಾವಣೆ ಮಾಡಲಾಗಿತ್ತು. ಮಳವಳ್ಳಿ ಡಿಪೊ ವ್ಯವಸ್ಥಾಪಕ ಶಂಕರ್‌, ಚಾಲಕ ರವಿಶಂಕರ್‌ಗೆ ಕರೆ ಮಾಡಿ ಕರ್ತವ್ಯಕ್ಕೆ ಹಾಜರಾಗದಿದ್ದರೆ ಅವರನ್ನೂ ವರ್ಗಾವಣೆ ಮಾಡುವುದಾಗಿ ಬೆದರಿಸಿದ್ದರು. ಅಲ್ಲದೆ ರವಿಶಂಕರ್‌ ಅವರ ಕಳೆದ ತಿಂಗಳ 2 ದಿನದ ವೇತನ ಕಡಿತ ಮಾಡಲಾಗಿತ್ತು. ಇದರಿಂದ ಹೆದರಿದ ಅವರು ಕಳೆನಾಶಕ ಕಾಳು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸಾರಿಗೆ ಸಂಸ್ಥೆ ಸಿಬ್ಬಂದಿ

ADVERTISEMENT

‘ಸರ್ಕಾರ ಕೂಡಲೇ 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕು. ವರ್ಗಾವಣೆಗೊಳಿಸಿರುವ ನಮ್ಮ ಡಿಪೊ ನೌಕರರನ್ನು ಮಳವಳ್ಳಿಯಲ್ಲೇ ಮರು ನಿಯೋಜನೆ ಮಾಡಬೇಕು’ ಎಂದು ಆತ್ಮಹತ್ಯೆಗೆ ಯತ್ನಿಸಿರುವ ರವಿಶಂಕರ್‌ ತಿಳಿಸಿದರು.

‘ನಾನು ರವಿಶಂಕರ್‌ಗೆ ಕರೆ ಮಾಡಿಲ್ಲ, ಯಾವುದೇ ಒತ್ತಡವನ್ನೂ ಹಾಕಿಲ್ಲ. ಏ.6ರ ನಂತರ ಅವರನ್ನು ಸಂಪರ್ಕಿಸಿಲ್ಲ’ ಎಂದು ಡಿಪೊ ವ್ಯವಸ್ಥಾಪಕ ಶಂಕರ್‌ ತಿಳಿಸಿದರು. ಘಟನೆ ನಂತರ ಸಾರಿಗೆ ಸಂಸ್ಥೆ ಸಿಬ್ಬಂದಿ ಡಿಪೊ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.