ADVERTISEMENT

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಇನ್ನು ತಿಂಗಳ ಮೊದಲ ದಿನವೇ ಸಂಬಳ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 18:11 IST
Last Updated 10 ಸೆಪ್ಟೆಂಬರ್ 2022, 18:11 IST
   

ಬೆಂಗಳೂರು: ಎಲ್ಲಾ ನೌಕರರಿಗೆ ಇನ್ನು ಪ್ರತಿ ತಿಂಗಳ ಮೊದಲ ದಿನವೇ ವೇತನ ಪಾವತಿ ಮಾಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.

ಅಕ್ಟೋಬರ್‌ನಿಂದ ಈ ಹೊಸ ಪದ್ಧತಿ ಜಾರಿಗೆ ಬರಲಿದೆ. ವೇತನದ ಬಿಲ್ಲುಗಳನ್ನು ತಯಾರಿಸಲು ಪ್ರತಿ ತಿಂಗಳ 20ರಿಂದ 30ರವರೆಗೆ ಊಹಾತ್ಮಕ ಹಾಜರಾತಿ ಪರಿಗಣಿಸಲಾಗುತ್ತದೆ. ಆದ್ದ ರಿಂದ ಈ ಅವಧಿಯಲ್ಲಿ ನೌಕರರು ಅನಧಿಕೃತ ಗೈರು ಹಾಜರಿ ಆಗದೆ ಹಾಗೂ ರಜೆ ಪಡೆಯದೆ (ಅತಿ ಅನಿವಾರ್ಯ ಕಾರಣ ಹೊರತುಪಡಿಸಿ), ಕರ್ತವ್ಯಕ್ಕೆ ಹಾಜರಾಗಬೇಕು. ಪೂರ್ಣ ಪ್ರಮಾಣದ ಸಂಬಳ ಪಡೆಯಲು ಇದರಿಂದ ಸಾಧ್ಯ ವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ತಿಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರಿಂದ ನಿಗದಿತ ಸಮಯಕ್ಕೆ ವೇತನ ಪಾವತಿ ಆಗದಂತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT