ADVERTISEMENT

ಶ್ರಮಿಕರ ನೆಮ್ಮದಿಯೇ ಕಲ್ಯಾಣ ರಾಜ್ಯದ ಬುನಾದಿ: ವಕೀಲ ದೀಕ್ಷಿತ್‌ ಕೃಷ್ಣ ಶ್ರೀಪಾದ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 20:10 IST
Last Updated 8 ಫೆಬ್ರುವರಿ 2020, 20:10 IST

ಕೆಂಗೇರಿ: ‘ಮೊದಲನೆ ಮಹಾಯುದ್ಧದಲ್ಲಿ ಆದ ಮಾನವ ಹಕ್ಕುಗಳ ಉಲ್ಲಂಘನೆ ಶ್ರಮಿಕರು ಮತ್ತು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಕಾರ್ಮಿಕ ಸಂಘಟನೆಯೊಂದರ ಹುಟ್ಟಿಗೆ ಕಾರಣವಾಯಿತು’ ಎಂದು ವಕೀಲ ದೀಕ್ಷಿತ್‌ ಕೃಷ್ಣ ಶ್ರೀಪಾದ್ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯವು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಮತ್ತು ಕಾರ್ಮಿಕ ಹಕ್ಕುಗಳ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಯುದ್ಧ ಸೃಷ್ಟಿಸಿದ ಹಲವು ಸಮಸ್ಯೆಗಳು, ಶ್ರಮಿಕರ ಹಕ್ಕುಗಳು ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಮುನ್ನೆಲೆಗೆ ತಂದಿತು. ಆ ಮೂಲಕ ಜಾಗತಿಕ ಬದಲಾವಣೆಗೆ ವೇದಿಕೆ ಕಲ್ಪಿಸಿತು. ನೇಮಕಾತಿ, ಸಮಾನ ವೇತನ, ಕೆಲಸದ ಅವಧಿ ಮುಂತಾದ ಕಾರ್ಮಿಕ ಸ್ನೇಹಿ ನೀತಿಗಳ ಜಾರಿಗೆ ಒತ್ತಾಸೆಯಾಯಿತು’ ಎಂದರು.

ಕುಲಪತಿ ಪ್ರೊ. ಕೆ.ಆರ್. ವೇಣು ಗೋಪಾಲ್ ಅವರು, ‘ಶ್ರಮಿಕರ ನೆಮ್ಮದಿಯೇ ಕಲ್ಯಾಣ ರಾಜ್ಯದ ಬುನಾದಿ ಸಂಘಟನೆಗಳು ಕಾರ್ಮಿಕರ ವರ್ಗದ ಏಳಿಗೆಗೆ ಶ್ರಮಿಸಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.