ADVERTISEMENT

ಶೀರೂರು ಶ್ರೀಗಳಿಗೆ ವಿಷಪ್ರಾಶನದ ಅನುಮಾನವಿಲ್ಲ: ಪೇಜಾವರ ಶ್ರೀ

ಶ್ರೀಗಳ ಪೂರ್ವಾಶ್ರಮದ ಸಹೋದರನಿಂದ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 10:37 IST
Last Updated 19 ಜುಲೈ 2018, 10:37 IST
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ (ಸಂಗ್ರಹ ಚಿತ್ರ)
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ (ಸಂಗ್ರಹ ಚಿತ್ರ)   

ಹುಬ್ಬಳ್ಳಿ:ಶಿರೂರುಶ್ರೀಗಳಿಗೆ ವಿಷಪ್ರಾಶನ ಮಾಡಿಸುವ ಪ್ರಶ್ನೆಯೇ ಉದ್ಬವಿಸಲ್ಲ ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಪಾದಂಗಳು ಸ್ಪಷ್ಟಪಡಿಸಿದ್ದಾರೆ.

ಅವರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರ ಅಂತಿಮ ವಿಧಿ ವಿಧಾನ ಕಾರ್ಯಕ್ಕೆ ಆಹ್ವಾನ ನೀಡಿದರೆ ನೋಡೋಣ ಎಂದರು.

ಶಿರೂರುಶ್ರೀಗಳ ಆತ್ಮಕ್ಕೆ ಇಲ್ಲಿಂದಲೇ ಶಾಂತಿ ಕೋರುತ್ತೇನೆ ಎಂದರು. ಅವರಿಗೆ ವಿಷ ನೀಡುವ ಪ್ರಮೇಯವೇ ಇಲ್ಲ. ಯಾರು ಇಂತಹ ಕೆಲಸ ಮಾಡಲು ಅವಕಾಶವಿಲ್ಲ. ಇಂತಹ ಅನುಮಾನ ಸೃಷ್ಟಿಸಿರುವುದು ಸರಿಯಲ್ಲ. ಸಂಶಯಕ್ಕೆ ಕಾರಣ ಬೇಕು. ಅಡುಗೆ ಪಾತ್ರೆ ಸರಿಯಿರಲಿಲ್ಲ. ಹೀಗಾಗಿ ಆಹಾರದೋಷದಿಂದ ತೊಂದರೆ ಆಗಿದೆ ಎಂದು ಅಣ್ಣಂದಿರೇ ಹೇಳಿದ್ದಾರೆ ಎಂದರು.

ADVERTISEMENT

ಒಂದು ವೇಳೆ ಅವರ ಬೃಂದಾವನಸ್ಥ ಕಾರ್ಯಕ್ಕೆ ಆಹ್ವಾನ ನೀಡಿದರೆ ನೋಡುತ್ತೇನೆ. ಬರದಿದ್ದರೆ ಹೋಗುವ ಪ್ರಶ್ನೆಯೇ ಇಲ್ಲ. ದಿನನಿತ್ಯ ಸಾಕಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಎಲ್ಲದಕ್ಕೂ ಅನುಮಾನ ಪಡುವುದು ಸರಿಯಲ್ಲ ಎಂದು ಪೇಜಾವರ ಶ್ರೀಗಳು ತಿಳಿಸಿದರು.

ದೂರು ದಾಖಲು: ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಂಶಯಾಸ್ಪದ ಸಾವಿಗೆ ಸಂಬಂಧಿಸಿ ತನಿಖೆ ನಡೆಸುವಂತೆ ಕೋರಿ ಶ್ರೀಗಳ ಶಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಅವರು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.