ADVERTISEMENT

ಭೂ ಪರಿವರ್ತನೆ ಸರಳೀಕರಣಕ್ಕೆ ಕ್ರಮ: ಆರ್.ಅಶೋಕ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 20:55 IST
Last Updated 17 ಮಾರ್ಚ್ 2021, 20:55 IST
 ಸಚಿವ ಆರ್. ಅಶೋಕ
ಸಚಿವ ಆರ್. ಅಶೋಕ    

ಬೆಂಗಳೂರು: ‘ವಾರದೊಳಗೆ ಭೂ ಪರಿವರ್ತನೆ ಮಂಜೂರಾತಿ ನಿಯಮ ಬದಲಿಸಲಾಗುವುದು’ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಜೆಡಿಎಸ್‍ನ ಎಚ್‌.ಎಂ.ರಮೇಶ್‌ಗೌಡ, ತಿಪ್ಪೇಸ್ವಾಮಿ ಜಂಟಿಯಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು,‘ಐದು ವರ್ಷಗಳಲ್ಲಿ ಭೂ ಸಮೀಕ್ಷೆಗಾಗಿ, ಅಂದರೆ 11ಇ ನಕ್ಷೆ, ಭೂ ಪರಿವರ್ತನೆ ನಕ್ಷೆ, ಹದ್ದುಬಸ್ತು, ತತ್ಕಾಲ್‌ ಮತ್ತು ಭೂ ಸ್ವಾಧೀನ, ಪೋಡಿ (ಜೆಎಂಸಿ ನಕ್ಷೆ) ಕೋರಿ ಒಟ್ಟು 36,79,331 ಅರ್ಜಿಗಳು ಬಂದಿವೆ. ಅವುಗಳಲ್ಲಿ ಶೇ 95ರಷ್ಟು ವಿಲೇವಾರಿಯಾಗಿದೆ. ವಿವಿಧ ಕಾರಣಗಳಿಗಾಗಿ 4,81,982 ಅರ್ಜಿಗಳು ಬಾಕಿ ಇವೆ’ ಎಂದರು.

‘ವಿಸ್ತೀರ್ಣ ಹಾಗೂ ಪಹಣಿಯ ಕಾಲಂಗಳಲ್ಲಿ ವ್ಯತ್ಯಾಸ, ಶಿಥಿಲವಾಗಿರುವ ದಾಖಲೆಗಳು, ಭೂ ಮಂಜೂರಾತಿ ವೇಳೆ ಕೆಲವು ಕಡೆ ನಕಲಿ ದಾಖಲೆ, ಫಲಾನುಭವಿಗಳ ಬಳಿ ದಾಖಲೆಗಳಿದ್ದರೂ ತಾಲ್ಲೂಕು ಕಚೇರಿಗಳಲ್ಲಿ ಇಲ್ಲದಿರುವುದು ಈ ರೀತಿಯ ಕಾರಣಗಳಿಂದ ಪೋಡಿ ವಿಳಂಬವಾಗುತ್ತಿದೆ. ತಪ್ಪಿತಸ್ಥ ಅಧಿಕಾರಿಗಳು ನಿವೃತ್ತರಾಗಿದ್ದರೂ ವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸರ್ವೆ ಕಾರ್ಯಕ್ಕೆ ಎರಡು ಸಾವಿರ ಸರ್ವೆಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.