ADVERTISEMENT

ಒಂದೂವರೆ ಸಾವಿರ ವಕೀಲರ ಸನ್ನದು ಅಮಾನತು

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 0:37 IST
Last Updated 8 ಜುಲೈ 2025, 0:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಎ.ಐ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಕರೆಯ ಮೇರೆಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡಿರುವ 1,531 ವಕೀಲರು ತಮ್ಮ ಸನ್ನದು ಅಮಾನತು ಮಾಡಿಸಿಕೊಂಡಿದ್ದಾರೆ.

ADVERTISEMENT

‘ರಾಜ್ಯದಲ್ಲಿನ 1,29,368 ವಕೀಲರ ಪೈಕಿ 59, 784 ವಕೀಲರು ಪರಿಷತ್ ಕರೆಗೆ ಯಾವುದೇ ಸ್ಪಂದನೆ ವ್ಯಕ್ತಪಡಿಸಿಲ್ಲ. ನ್ಯಾಯಮೂರ್ತಿಗಳು, ಸಚಿವರು, ವಿವಿಧ ಸಾಂವಿಧಾನಿಕ ಹುದ್ದೆಗಳು, ಪ್ರಾಸಿಕ್ಯೂಟರ್‌ಗಳು, ಸಹಾಯಕ ಪ್ರಾಸಿಕ್ಯೂಟರ್‌ಗಳು, ಲಾಡ್ಜ್‌, ಪೆಟ್ರೋಲ್‌ ಪಂಪ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ರೆಸಾರ್ಟ್‌, ವಿವಿಧ ಸರ್ಕಾರಿ ಮತ್ತು ಅರೆ ಸರ್ಕಾರಿ ಹುದ್ದೆ, ಉಪನ್ಯಾಸಕ ವೃತ್ತಿಯಲ್ಲಿ ಇರುವವರು 2025ರ ಜುಲೈ 15ರ ಒಳಗೆ ಸನ್ನದು ಅಮಾನತು ಮಾಡಿಸಿಕೊಳ್ಳಬೇಕು. ಇಲ್ಲದೇ ಹೋದರೆ ವಕೀಲರ ಕಾಯ್ದೆ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಎಸ್‌ಬಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ‘ಈವರೆವಿಗೂ 68,553 ವಕೀಲರು ಸರ್ಟಿಫಿಕೇಟ್‌ ಆಫ್‌ ಪ್ರ್ಯಾಕ್ಟೀಸ್‌ಗೆ (ಸಿಒಪಿ) ಅರ್ಜಿ ಸಲ್ಲಿಸಿದ್ದಾರೆ. ಸಿಒಪಿಗೆ ಅರ್ಜಿ ಸಲ್ಲಿಸಿರುವವರು ksbc.org.inನಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳಬಹುದು’ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.