ADVERTISEMENT

ಪರಿಷತ್ತಿನ ಪ್ರಶ್ನೋತ್ತರ | ಬಗರ್‌ಹುಕುಂ ಜಮೀನಿನ ಖಾತೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 0:07 IST
Last Updated 20 ಮಾರ್ಚ್ 2025, 0:07 IST
   

‘ಬಗರ್‌ಹುಕುಂ ಜಮೀನಿನ ಖಾತೆಗೆ ಕ್ರಮ’

ಬಗರ್‌ಹುಕುಂ ಅಡಿಯಲ್ಲಿ ಮಂಜೂರಾದ ಜಮೀನುಗಳಿಗೆ ಖಾತೆ ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುತ್ತಿರುವ ಬಗ್ಗೆ ದೂರು ಬಂದರೆ, ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಕ್ರಮವಾಗಿ ಮಂಜೂರಾದ ಪ್ರಕರಣಗಳಲ್ಲಿ ಖಾತೆ ಆಗುವುದಿಲ್ಲ. ಕ್ರಮಬದ್ಧವಾಗಿ ಇರುವ ಪ್ರಕರಣಗಳಲ್ಲಿ ಖಾತೆ ಮಾಡಿಕೊಡಲಾಗುತ್ತದೆ. ಅದನ್ನು ಶೀಘ್ರವೇ ಮುಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ.

5.61 ಲಕ್ಷ–ಬಗರ್‌ಹುಕುಂ ಅಡಿ ನಮೂನೆ 50, 53 ಮತ್ತು 57ರ ಅಡಿ ಖಾತೆ ಮಾಡಿಕೊಡಲಾದ ಅರ್ಜಿಗಳ ಸಂಖ್ಯೆ

19,142–ಖಾತೆ ಮಾಡಿಕೊಡಲು ಬಾಕಿಯಿರುವ ಅರ್ಜಿಗಳ ಸಂಖ್ಯೆ

ADVERTISEMENT

–ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರ

‘ಕುರಿ ವಧಾಗಾರ ಉದ್ಘಾಟನೆ ಶೀಘ್ರ’

ಶಿರಾ ತಾಲ್ಲೂಕಿನಲ್ಲಿ ಕುರಿ ಕಟಾವಿಗೆ ನಿರ್ಮಿಸುತ್ತಿರುವ ಆಧುನಿಕ ಸಂಸ್ಕರಣಾ ಘಟಕ (ವಧಾಗಾರ) ಸಂಪೂರ್ಣ ಸಿದ್ಧವಾಗಿದೆ. ಶೀಘ್ರವೇ ಉದ್ಘಾಟನೆಯಾಗಲಿದೆ. ಪ್ರತಿದಿನ 1,500 ಕುರಿಗಳ ವಧೆ ಮತ್ತು ಕುರಿಮಾಂಸ ಸಂಸ್ಕರಣೆ ಸಾಮರ್ಥ್ಯ ಇರುವ ವಧಾಗಾರದಿಂದ ತಾಲ್ಲೂಕಿನ ಕುರಿಗಾಹಿಗಳಿಗೆ ಅನುಕೂಲವಾಗಲಿದ್ದು, ಸಾಗಣೆ ವೆಚ್ಚ ಕಡಿಮೆಯಾಗಲಿದೆ. 150–200 ಯುವಜನರಿಗೆ ಉದ್ಯೋಗ ದೊರೆಯಲಿದೆ. ಕುರಿಗಾಹಿಗಳ ರಕ್ಷಣೆಗೆ ಪ್ರತ್ಯೇಕ ಕಾನೂನು ರಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

–ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಚಿದಾನಂದ ಎಂ.ಗೌಡ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರ

‘ದೇವಾಲಯಗಳ ಆದಾಯ ಹೆಚ್ಚಳ’

ದೇವಾಲಯಗಳಿಂದ ಸಂಗ್ರಹವಾಗುವ ಆದಾಯ ಹೆಚ್ಚಳವಾಗಿದೆ. ದೇವಾಲಯಗಳ ಆಸ್ತಿಗಳಿಂದ ಆದಾಯ ಸಂಗ್ರಹಿಸುವ ಸಂಬಂಧ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಈಗಾಗಲೇ ಕೆಲವೆಡೆ ಇದನ್ನು ಜಾರಿಗೆ ತರಲಾಗಿದೆ. ಮುಜರಾಯಿ ಅಡಿಯಲ್ಲಿ ಬರುವ ದೇವಾಲಯಗಳಲ್ಲಿ ಸಂಗ್ರಹವಾಗುವ ಆದಾಯ ಅವುಗಳ ಖಾತೆಗೇ ಜಮೆಯಾಗುತ್ತದೆ, ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗುವುದಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.