ADVERTISEMENT

ಮಾಸ್ಕ್‌ ರಹಿತ ದಿನಗಳು ಬರಲಿ: ಹೈಕೋರ್ಟ್ ಸಿಜೆ ಋತುರಾಜ್ ಅವಸ್ಥಿ ಆಶಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 15:47 IST
Last Updated 3 ಜನವರಿ 2022, 15:47 IST
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್   

ಬೆಂಗಳೂರು:‘ಈ ವರ್ಷವಾದರೂ ನಾವೆಲ್ಲರೂ ಮಾಸ್ಕ್ ತೆಗೆದು ಓಡಾಡುವಂತಹ ದಿನಗಳು ಬರಲಿ’ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ) ಋತುರಾಜ್ ಅವಸ್ಥಿ ಆಶಿಸಿದರು.

ಚಳಿಗಾಲದ ರಜೆ ನಂತರ ಹೊಸ ವರ್ಷಾರಂಭದ ಮೊದಲ ಕಲಾಪ ಸೋಮವಾರ ನಡೆಯಿತು. ಬೆಳಗ್ಗೆ 10.30ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆಯೇ ನ್ಯಾಯಪೀಠದಲ್ಲಿ ಆಸೀನರಾದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ಕೋರ್ಟ್ ಹಾಲ್‌ನಲ್ಲಿ ಹಾಜರಿದ್ದ ವಕೀಲರು, ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ, ‘ಪ್ರತಿಯೊಬ್ಬರಿಗೂ ಹೊಸ ವರ್ಷದ ಶುಭಾಶಯಗಳು’ ಎಂದರು.

‘ಈ ವರ್ಷವಾದರೂ ನಾವೆಲ್ಲಾ ಮಾಸ್ಕ್ ತೆಗೆದು ಓಡಾಡುವಂತಹ ದಿನಗಳು ಬರಲಿ. ದೇಶ ಹಾಗೂ ರಾಜ್ಯ ಕೊರೊನಾ ಸೋಂಕಿನಿಂದ ಮುಕ್ತವಾಗಲಿ. ಜನ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಲಿ’ ಎಂಬ ಆಶಯ ವ್ಯಕ್ತಪಡಿಸಿದರು.

ADVERTISEMENT

ಕೋವಿಡ್‌ ಭಯ: ಸಾಮಾನ್ಯವಾಗಿ ಹೊಸ ವರ್ಷದ ಮೊದಲ ಕಲಾಪದ ದಿನ ಕಾರಿಡಾರ್‌ನಲ್ಲಿ ವಕೀಲರು, ಕಕ್ಷಿದಾರರ ಸಂಖ್ಯೆ ಹೆಚ್ಚಾಗಿ ಇರುತ್ತಿದ್ದುದು ಸಾಮಾನ್ಯ. ಆದರೆ, ಈ ಬಾರಿ ಬೆರಳೆಣಿಕೆಯಷ್ಟು ವಕೀಲರು, ಕಕ್ಷಿದಾರರು ಕಾಣಿಸಿಕೊಂಡರು. ಫೈಲಿಂಗ್‌ ವಿಭಾಗದಲ್ಲಿ ಸಂಜೆ ಹೊತ್ತಿಗೆ ಉದ್ದನೆಯ ಸರತಿ ಸಾಲು ಇದ್ದುದು ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.