ADVERTISEMENT

ಮದ್ಯದಂಗಡಿ ಹರಾಜು ಶೀಘ್ರ: ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 16:15 IST
Last Updated 25 ಸೆಪ್ಟೆಂಬರ್ 2025, 16:15 IST
ಆರ್‌.ಬಿ. ತಿಮ್ಮಾಪುರ
ಆರ್‌.ಬಿ. ತಿಮ್ಮಾಪುರ   

ಬೆಂಗಳೂರು: ‘ಅವಧಿ ಮುಗಿದಿರುವ ಮದ್ಯದಂಗಡಿಗಳನ್ನು ಹರಾಜು ಮೂಲಕ ಹಂಚಿಕೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಕರಡು ನಿಯಮ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹರಾಜು ಪ್ರಕ್ರಿಯೆಗೆ ತಯಾರಿ ಆಗುತ್ತಿದೆ. ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ಕೊಡಬೇಕೆಂಬ ಚಿಂತನೆಯಿದೆ. ಕರಡು ನಿಯಮ ಈಗಾಗಲೇ ಸಿದ್ಧವಾಗಿದೆ’ ಎಂದರು.

‘ಸಾಮಾನ್ಯವಾಗಿ ಹರಾಜು ಹಾಕಬೇಕೇ, ಮೀಸಲಾತಿ ನೀಡಬೇಕೇ ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಶುಕ್ರವಾರ ಚರ್ಚೆ ಮಾಡುತ್ತೇನೆ. ಹರಾಜು ಪ್ರಕ್ರಿಯೆಯಿಂದ ₹ 2 ಸಾವಿರ ಕೋಟಿ ವರಮಾನ ಬರಬಹುದೆಂಬ ನಿರೀಕ್ಷೆಯಿದೆ’ ಎಂದೂ ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.