ADVERTISEMENT

ನಿವೇಶನದ ಸರ್ವೆ ಸ್ಕೆಚ್‌ ನೀಡಲು ₹1.50 ಲಕ್ಷ ಲಂಚ: ಸರ್ವೆ ಸೂಪರ್‌ವೈಸರ್‌ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 16:14 IST
Last Updated 6 ಜೂನ್ 2025, 16:14 IST
<div class="paragraphs"><p>ಲಂಚ</p></div>

ಲಂಚ

   

ಬೆಂಗಳೂರು: ಕೈಗಾರಿಕಾ ನಿವೇಶನದ ಸರ್ವೆ ಸ್ಕೆಚ್‌ ನೀಡಲು ₹1.50 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಸರ್ವೆ ಸೂಪರ್‌ವೈಸರ್‌ ಅನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

‘ಬೆಂಗಳೂರು ನಿವಾಸಿ ರವಿ ಅವರಿಗೆ ಕೆಐಎಡಿಬಿಯಿಂದ ಕೈಗಾರಿಕಾ ನಿವೇಶನ ಮಂಜೂರಾಗಿದ್ದು, ಅದರ ಸರ್ವೆ ಸ್ಕೆಚ್‌ಗಾಗಿ ಕೆಐಎಡಿಬಿಯ ಬೆಂಗಳೂರು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಸಂಬಂಧಿತ ಸರ್ವೆ ಸೂಪರ್‌ವೈಸರ್‌ ನರೇಂದ್ರ ಕುಮಾರ್ ಅವರು ₹1.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ರವಿ ದೂರು ನೀಡಿದ್ದರು. ಲೋಕಾಯುಕ್ತ ಎಸ್‌ಪಿ ಕೋನ ವಂಶಿ ಕೃಷ್ಣ ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ರೂಪಿಸಲಾಗಿತ್ತು. ರವಿ ಅವರು ಕೆಐಎಡಿಬಿ ಕಚೇರಿ ಬಳಿ ನರೇಂದ್ರ ಅವರಿಗೆ ಹಣ ನೀಡಿದಾಗ ಬಂಧಿಸಲಾಯಿತು’ ಎಂದು ತಿಳಿಸಿದರು.

‘ಬಂಧಿತರಿಂದ ಲಂಚದ ಹಣ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.