ADVERTISEMENT

ಕೆಂಪು ಚಂದಿರ.. ನೋಡೋಣ ಬನ್ನಿ...

​ಪ್ರಜಾವಾಣಿ ವಾರ್ತೆ
Published 27 ಜುಲೈ 2018, 4:56 IST
Last Updated 27 ಜುಲೈ 2018, 4:56 IST
   

ಬೆಂಗಳೂರು: ಶತಮಾನದ ಅತಿ ಸುದೀರ್ಘ ‘ಕೆಂಪು’ ಚಂದ್ರ ಗ್ರಹಣ ಇಂದು (ಶುಕ್ರವಾರ) ರಾತ್ರಿ 11.44 ಕ್ಕೆ ಆರಂಭಗೊಂಡು ಶನಿವಾರ ಬೆಳಗ್ಗಿನ ಜಾವ 3.48 ಕ್ಕೆ ಮುಗಿಯುತ್ತದೆ.

ರಾಜ್ಯದ ಎಲ್ಲ ಕಡೆಗಳಲ್ಲಿ ಗ್ರಹಣ ವೀಕ್ಷಿಸಬಹುದು. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಕೊಂಚ ಕೆಂಪು ಬಣ್ಣದಿಂದ ಕಂಗೊಳಿಸುತ್ತದೆ.

ಗ್ರಹಣದ ಅವಧಿ: 3 ಗಂಟೆ 48 ನಿಮಿಷ

ADVERTISEMENT

ಆರಂಭ : ರಾತ್ರಿ 11.54

ಸಂಪೂರ್ಣ ಗ್ರಹಣ: ಶನಿವಾರ ಮುಂಜಾನೆ 1.51

ಗ್ರಹಣ ಅಂತ್ಯ: ಮುಂಜಾನೆ 3.48

ಎಲ್ಲೆಲ್ಲಿ ವೀಕ್ಷಿಸಬಹುದು:ಕರ್ನಾಟಕದ ಎಲ್ಲ ಪ್ರದೇಶಗಳು. ಭಾರತ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕದ ಪೂರ್ವಭಾಗ, ಏಷ್ಯಾ ಖಂಡದ ಎಲ್ಲ ದೇಶಗಳು ಮತ್ತು ಅಂಟಾರ್ಟಿಕ.

* ಮಂಗಳ ಗ್ರಹ ಭೂಮಿಗೆ ಸಮೀಪ ಬರುವುದರಿಂದ ಪ್ರಕಾಶಮಾನವಾಗಿ ಗೋಚರಿಸುತ್ತದೆ

* ಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು. ಹೆಚ್ಚು ಸ್ಪಷ್ಟವಾಗಿ ನೋಡಬೇಕೆಂದರೆ ಟೆಲಿಸ್ಕೋಪ್‌ ಬಳಸಬಹುದು

ಹವಾಮಾನ

ರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ಮೋಡ ಕವಿದ ವಾತಾವರಣ ಇರಲಿದೆ. ಆದರೆ, ಚಲನೆಯಲ್ಲಿರುವ ಮೋಡವಾದ್ದರಿಂದ ಕೆಲವೊಮ್ಮೆ ಆಕಾಶ ತಿಳಿಯಾಗಿ ಚಂದ್ರ ಸ್ಪಷ್ಟವಾಗಿ ಗೋಚರಿಸುವ ಸಾಧ್ಯತೆ ಇದೆ

–ಶ್ರೀನಿವಾಸರೆಡ್ಡಿ, ನಿರ್ದೇಶಕ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.