ಹುಬ್ಬಳ್ಳಿ: ಕಳಸಾ ಬಂಡೂರಿ, ಮಹದಾಯಿ ಹೋರಾಟಗಾರ ಚಂದ್ರಶೇಖರಯ್ಯ ಶಿವಯ್ಯ ಕಿಲಾರಿಮಠ(52) ಬುಧವಾರ ಬೆಳಿಗ್ಗೆ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ರೈತ ಹೋರಾಟಗಾರರಾಗಿದ್ದ ಕಿಲಾರಿಮಠ ಅವರು ಕಳಸಾ ಬಂಡೂರಿ, ಮಹದಾಯಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.
ನರಗುಂದ-ನವಲಗುಂದ-ಹುಬ್ಬಳ್ಳಿ-ಧಾರವಾಡ, ಮುನವಳ್ಳಿ,ಬಾದಾಮಿ ಸೇರಿದಂತೆ ವಿವಿಧೆಡೆ ನಡೆದ ಕಳಸಾ ಬಂಡೂರಿ ಹೋರಾಟಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು.
ಹುಬ್ಬಳ್ಳಿ ವಿಜಯನಗರ ನಿವಾಸಿಯಾಗಿದ್ದರು. ಅವರಿಗೆ ಮಾತು ಬರುತ್ತಿರಲಿಲ್ಲ. ಆದರೂ ಹೋರಾಟದಲ್ಲಿ ಸಕ್ರಿಯವಾಗಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.