ADVERTISEMENT

ಮನೆಯಲ್ಲೇ ಮಹಾವೀರ ಜಯಂತಿ ಆಚರಿಸಿ : ಕರ್ನಾಟಕ ಜೈನ ಅಸೋಸಿಯೇಷನ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 7:52 IST
Last Updated 2 ಏಪ್ರಿಲ್ 2020, 7:52 IST

ಬೆಂಗಳೂರು: ಇದೇ 6ರಂದು ಜೈನ ಸಮುದಾಯದವರು ಮಹಾವೀರ ಜಯಂತಿಯನ್ನು ಮನೆಯಲ್ಲಿಯೇ ಜಪ ಮತ್ತು ಭಜನೆ ಮಾಡುವ ಮೂಲಕ ಆಚರಿಸಬೇಕು ಎಂದು ಕರ್ನಾಟಕ ಜೈನ ಅಸೋಸಿಯೇಷನ್ ಮನವಿ ಮಾಡಿದೆ.

'ಕೊರೊನಾ ಸೋಂಕಿನಿಂದ ಹೆಚ್ಚಿನ ಅನಾಹುತ ಆಗದಂತೆ ತಡೆಯುವ ಮತ್ತು ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದ್ದು, ರಾಜ್ಯದ ಜಿನ ಮಂದಿರಗಳಲ್ಲಿ ಮತ್ತು ಮಹಾವೀರ ಭವನಗಳಲ್ಲಿ ಯಾವುದೇ ರೀತಿಯ ಜಯಂತ್ಯುತ್ಸವ ಅಥವಾ ಮೆರವಣಿಗೆ, ಸಾಮೂಹಿಕ ಪೂಜಾ-ಅಭಿಷೇಕ ಮಹೋತ್ಸವ ಜರುಗಿಸುವಂತಿಲ್ಲ' ಎಂದು ಅಸೋಸಿಯೇಷನ್ ಅಧ್ಯಕ್ಷ ಬಿ. ಪ್ರಸನ್ನಯ್ಯ ಹೇಳಿದ್ದಾರೆ.

'ಬಸದಿಗಳಲ್ಲಿ ಇಬ್ಬರು ಅಥವಾ ಮೂವರು ಪುರೋಹಿತರು ಮಾತ್ರ ಇದ್ದು, ಬೆಳಿಗ್ಗೆ ಪೂಜೆ ಮಾಡುವುದು ಸೂಕ್ತ ಎಂದು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ. ಇದಕ್ಕೆ ಜೈನ ಮಠಗಳ ಎಲ್ಲ ಭಟ್ಟಾರಕ ಸ್ವಾಮೀಜಿಗಳು ಸಮ್ಮತಿಸಿದ್ದಾರೆ' ಎಂಬುದಾಗಿ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.