ADVERTISEMENT

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸುವುದು ಕೇಂದ್ರದ ಜವಾಬ್ದಾರಿ: ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:37 IST
Last Updated 8 ಡಿಸೆಂಬರ್ 2025, 6:37 IST
ಎನ್‌. ಚಲುವರಾಯಸ್ವಾಮಿ ಸಚಿವ 
ಎನ್‌. ಚಲುವರಾಯಸ್ವಾಮಿ ಸಚಿವ    

ಬೆಳಗಾವಿ: 'ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಯಾವಾಗಲೂ ಅತಿವೃಷ್ಟಿ ಅಥವಾ ಅನಾವೃಷ್ಟಿ‌ ಸಮಸ್ಯೆ ಇದ್ದೇ ಇರುತ್ತದೆ. ಈ ಬಾರಿ 60 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಈ ಭಾಗದಲ್ಲಿ ‌ಬೆಳೆದಿದ್ದಾರೆ. ಇದಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಬೇಕಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ' ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಕಬ್ಬು ಬೆಳೆಗಾರರ ಸಮಸ್ಯೆಗೆ ಈಗಾಗಲೇ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ.

ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿದರೂ‌ ಮೆಕ್ಕೆ ಜೋಳ‌ ಖರೀದಿಗೆ ಒಪ್ಪಿಗೆ ಕೊಡಲಿಲ್ಲ' ಎಂದರು.

ADVERTISEMENT

'ಎಥೆನಾಲ್ ಪೌಲ್ಟ್ರಿಗೂ ಖರೀದಿ ಮಾಡುವಂತೆ ಹೇಳಿದ್ದೇವೆ. ಸಿ.ಎಂ ಕೂಡ ಹೇಳಿದ್ದಾರೆ. ಇದರ ಸಾಗಣೆ ವೆಚ್ಚವನ್ನು ಕೂಡ ಸರ್ಕಾರ ಬರಿಸಲಿದೆ' ಎಂದರು.

ನಾನು ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ: 'ನಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಮುಂಚೂಣಿ ಸ್ಪರ್ಧೆಯಲ್ಲಿದ್ದೇನೆ' ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜು ಕಾಗೆ ಅವರದು ವೈಯಕ್ತಿಕ ಹೇಳಿಕೆ. ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ನಮಗೆ ಏನು ಬೇಕು ಎಂಬ ಬೇಡಿಕೆ ಮಂಡಿಸುತ್ತೇವೆ' ಎಂದರು.

'ಬಿಜೆಪಿಯವರಿಗೆ ನಾವು ಸದನದಲ್ಲಿ ಸರಿಯಾದ ರೀತಿಯಲ್ಲಿ ಉತ್ತರ ನೀಡುತ್ತೇವೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.