
ಪ್ರಜಾವಾಣಿ ವಾರ್ತೆ
ಮೆಕ್ಕೆಜೋಳ
ಬೆಂಗಳೂರು: ಪ್ರತಿ ರೈತರಿಂದ ಮೆಕ್ಕೆಜೋಳ ಖರೀದಿಸಲು ವಿಧಿಸಿದ್ದ ಗರಿಷ್ಠ 20 ಕ್ವಿಂಟಲ್ ಮಿತಿಯನ್ನು ರಾಜ್ಯ ಸರ್ಕಾರವು 50 ಕ್ವಿಂಟಲ್‌ಗೆ ಹೆಚ್ಚಿಸಿದೆ.
ಪ್ರತಿ ಕ್ವಿಂಟಲ್‌ಗೆ ₹2,400 ಬೆಂಬಲ ಬೆಲೆಯಲ್ಲಿ, ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿರುವ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಿ ಎಂದು ಸಹಕಾರ ಇಲಾಖೆಯು ಇದೇ 2ರಂದು ಆದೇಶ ಹೊರಡಿಸಿತ್ತು.
ಇಲಾಖೆಯು ಹೇರಿದ್ದ ಈ ಮಿತಿಗೆ ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇಲಾಖೆಯು ಭಾನುವಾರ ಆದೇಶ ಹೊರಡಿಸಿದ್ದು, ಮಿತಿಯನ್ನು 50 ಕ್ವಿಂಟಲ್‌ಗೆ ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.