ADVERTISEMENT

ಮಲಬಾರ್‌: ಫೆ.18ರವರೆಗೆ ಜೆಮ್‌ಸ್ಟೋನ್ಸ್‌ ಉತ್ಸವ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 17:36 IST
Last Updated 29 ಜನವರಿ 2021, 17:36 IST

ಬೆಂಗಳೂರು: ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್‌ನ ಎಲ್ಲ ಮಳಿಗೆಗಳಲ್ಲಿ ‘ಜೆಮ್‌ಸ್ಟೋನ್ಸ್‌ ಜ್ಯುವೆಲ್ಲರಿ ಉತ್ಸವ’ವನ್ನುಫೆ.18ರವರೆಗೆ ಆಯೋಜಿಸಲಾಗಿದೆ.

‘ಸಂಸ್ಥೆಯ ಉಪ ಬ್ರ್ಯಾಂಡ್‌ನ ಸಂಗ್ರಹಗಳಾದ ಪ್ರೀಶಿಯಾ, ರತ್ನದ ಆಭರಣಗಳು ಮತ್ತು ಅನ್‌ಕಟ್‌ ವಜ್ರದ ಆಭರಣಗಳು, ಚಿನ್ನದಲ್ಲಿ ಹೆಣೆದ ಆಭರಣಗಳು,ಎಮರಾಲ್ಡ್, ರೂಬಿ, ಸಫೈರ್ ಹಾಗೂಚಿನ್ನದಿಂದ ತಯಾರಿಸಲಾದ ಆಭರಣಗಳನ್ನು ಉತ್ಸವದಲ್ಲಿ ಅನಾವರಣಗೊಳಿಸಲಾಗಿದೆ’ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

‘ಆಭರಣಗಳ ಮೇಲೆ ಉಚಿತ ನಿರ್ವಹಣೆ, ಒಂದು ವರ್ಷದ ವಿಮೆ, ಬೈಬ್ಯಾಕ್ ಗ್ಯಾರಂಟಿ ಹಾಗೂ ವಿವರಗಳೊಂದಿಗೆ ಪಾರದರ್ಶಕ ಬೆಲೆಯ ಸೌಲಭ್ಯಗಳನ್ನು ಗ್ರಾಹಕರು ಉತ್ಸವದಲ್ಲಿ ಪಡೆಯಲಿದ್ದಾರೆ’.

ADVERTISEMENT

‘ಎಲ್ಲ ಶ್ರೇಣಿಯ ಆಭರಣಗಳನ್ನು ಹೊರ ತಂದಿರುವ ಸಂಸ್ಥೆಯು ಎಲ್ಲ ವಯೋಮಾನದವರ ಅಭಿರುಚಿಯನ್ನು ಪೂರೈಸುತ್ತದೆ.ವಿವಾಹದ ಖರೀದಿಗೆ ವಿಶೇಷವಾದ ಪ್ರಯೋಜನಗಳನ್ನು ನೀಡುತ್ತಿದ್ದು, ಶೇ 10ರಷ್ಟು ಮುಂಗಡ ಬುಕಿಂಗ್ ಸೌಲಭ್ಯವೂ ಇದೆ. ಸಂಸ್ಥೆ ಪ್ರಸ್ತುತ 10 ದೇಶಗಳಲ್ಲಿ 270ಕ್ಕೂ ಹೆಚ್ಚು ಮಳಿಗೆಗಳೊಂದಿಗೆ ಬಲವಾದ ಜಾಲವನ್ನು ಹೊಂದಿದೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.