ADVERTISEMENT

ತಂದೆಯ ಆತ್ಮಹತ್ಯೆ: ಆಘಾತದ ನಡುವೆಯೂ ಪರೀಕ್ಷೆ ಬರೆದ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 17:38 IST
Last Updated 22 ಜುಲೈ 2021, 17:38 IST
ಬಿಂದು
ಬಿಂದು   

ಕೆಂಭಾವಿ (ಯಾದಗಿರಿ): ಸಾಲದ ಕಾರಣಕ್ಕೆ ತಂದೆ ಕಾಲುವೆಗೆ ಹಾರಿ ಸಾವಿಗೀಡಾದ ದುಃಖದ ನಡುವೆಯೂ ವಿದ್ಯಾರ್ಥಿನಿ ಬಿಂದು ದೇಶಪಾಂಡೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ.

ನಗನೂರ ಗ್ರಾಮದ ರೈತ ನಿರ್ಮಲರೆಡ್ಡಿ ದೇಶಪಾಂಡೆ (38) ಅವರು ಸಾಲದ ಕಾರಣಕ್ಕೆ ಬುಧವಾರ ಸಂಜೆ ನಾರಾಯಣಪುರ ಎಡದಂಡೆ ಕಾಲುವೆಗೆ ಹಾರಿದ್ದರು. ಇದನ್ನು ನೋಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರಶೋಧ ಕಾರ್ಯ ನಡೆದಿತ್ತು.

ಈ ದುಃಖದ ನಡುವೆಯೂ ಗುರುವಾರ ಬೆಳಿಗ್ಗೆ ಬಿಂದು ಕೆಂಭಾವಿ ಪಟ್ಟಣದ ವಿದ್ಯಾಲಕ್ಷ್ಮಿ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದರು. ಪರೀಕ್ಷೆ ಮುಗಿಯುವ ವೇಳೆಗೆ ಕಾಲುವೆಯಲ್ಲಿ ತಂದೆಯ ಮೃತದೇಹ ಪತ್ತೆಯಾಗಿತ್ತು.

ADVERTISEMENT

‘ನಗನೂರ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ₹ 70 ಸಾವಿರ, ಕೆಂಭಾವಿ ಎಸ್‍ಬಿಐನಲ್ಲಿ ₹ 1.50 ಲಕ್ಷ ಹಾಗೂ ಕೈಸಾಲ ಮಾಡಿಕೊಂಡಿದ್ದರು’ ಎಂದು ಕೆಂಭಾವಿ ಪೊಲೀಸ್ ಠಾಣೆಯ ಪಿಎಸ್‍ಐ ಗಜಾನಂದ ಬಿರಾದಾರ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.