ADVERTISEMENT

ಟಿಎಸ್‌ಎಸ್‌ ಚುನಾವಣಾ ಲೋಪ: ಮಂಜುನಾಥ್‌ ಸಿಂಗ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 29 ಮೇ 2024, 23:30 IST
Last Updated 29 ಮೇ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಉತ್ತರಕನ್ನಡ ಜಿಲ್ಲೆ ಶಿರಸಿಯ ದಿ ತೋಟಗಾರ್ಸ್‌ ಕೋ–ಆಪರೇಟಿವ್‌ ಸೇಲ್‌ ಸೊಸೈಟಿಗೆ (ಟಿಎಸ್‌ಎಸ್‌) ವಿಶೇಷಾಧಿಕಾರಿ ನೇಮಕ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲಾ ಸಹಕಾರ ಇಲಾಖೆ ಉಪನಿಬಂಧಕ ಎಸ್‌.ಜಿ.ಮಂಜುನಾಥ್‌ ಸಿಂಗ್ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಟಿಎಸ್‌ಎಸ್‌ ಚುನಾವಣೆ ಪ್ರಕ್ರಿಯೆಯಲ್ಲಿ ಲೋಪದೋಷಗಳಾಗಿವೆ ಎಂದು ಚುನಾವಣಾ ತಕರಾರು ಅರ್ಜಿಗಳು ದಾಖಲಾಗಿದ್ದವು. ಆ ವೇಳೆ,  ಮಂಜುನಾಥ್ ಸಿಂಗ್ ಅವರು ಕರ್ತವ್ಯಕ್ಕೆ ಹಾಜರಾಗದೇ  ಅಜ್ಞಾತ ಸ್ಥಳದಿಂದ ಆದೇಶವೊಂದನ್ನು ಹೊರಡಿಸಿ ಚುನಾವಣಾ ಫಲಿತಾಂಶ ರದ್ದುಪಡಿಸಿದ್ದರು. ಅಲ್ಲದೇ, ಶಿಕ್ಷಣಾಧಿಕಾರಿ ಎಂ.ಎಸ್‌.ನಾಯ್ಕ ಅವರನ್ನು ವಿಶೇಷಾಧಿಕಾರಿಯನ್ನಾಗಿ ನೇಮಿಸಿದ್ದರು. ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ಆವರು ತಂದಿರಲಿಲ್ಲ.

ADVERTISEMENT

‘ಮೇಲಧಿಕಾರಿಗಳ ಅನುಮತಿಯನ್ನೂ ಪಡೆಯದೇ ಅವರು ಕಚೇರಿಗೆ ಗೈರುಹಾಜರಾಗಿದ್ದ ಸಿಂಗ್‌, ಅದೇ ಅವಧಿಯಲ್ಲಿ ಆದೇಶವನ್ನೂ ಹೊರಡಿದ್ದರು. ಈ ರೀತಿ ನಡೆದುಕೊಂಡಿದ್ದರಿಂದಾಗಿ, ಟಿಎಸ್‌ಎಸ್‌ನಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಲು ಕಾರಣವಾಯಿತು. ಇಂತಹ ಗಂಭೀರ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರದೇ ಇರುವುದು ಗಂಭೀರ ವಿಚಾರ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.