ADVERTISEMENT

ಮಂತ್ರಾಲಯದಲ್ಲಿ ಮೊದಲ ಸ್ಥಳೀಯ ಭಕ್ತರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 12:58 IST
Last Updated 22 ಜೂನ್ 2021, 12:58 IST
ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಮಂಗಳವಾರದಿಂದ ರಾಯರ ಮೂಲವೃಂದಾವನ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಲಾಗಿದೆ
ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಮಂಗಳವಾರದಿಂದ ರಾಯರ ಮೂಲವೃಂದಾವನ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಲಾಗಿದೆ   

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠವನ್ನು ಮಂಗಳವಾರದಿಂದ ದರ್ಶನಕ್ಕೆ ತೆರೆಯಲಾಗಿದ್ದು, ಮೊದಲ ದಿನ ಸ್ಥಳೀಯ ಭಕ್ತರು ಮಾತ್ರ ರಾಯರ ಮೂಲವೃಂದಾವನ ದರ್ಶನ ಪಡೆದರು.

ಹೊರಜಿಲ್ಲೆಗಳಿಂದ ಇನ್ನೂ ಬಸ್‌ ಸಂಚಾರ ಸಾಕಷ್ಟು ಆರಂಭವಾಗಿಲ್ಲ. ಹೀಗಾಗಿ ರಾಯಚೂರು ಹಾಗೂ ಮಂತ್ರಾಲಯ ಅಕ್ಕಪಕ್ಕದ ಗ್ರಾಮಗಳಿಂದ ಕೆಲವೇ ಭಕ್ತರು ಕೋವಿಡ್‌ ನಿಯಮಗಳ ಪಾಲನೆಯೊಂದಿಗೆ ದರ್ಶನಕ್ಕಾಗಿ ಬಂದಿದ್ದರು.

ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 9 ಗಂಟೆವರೆಗೂ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸದ್ಯಕ್ಕೆ ಅನ್ನಪ್ರಸಾದ ವ್ಯವಸ್ಥೆ ಮಠದಿಂದ ಮಾಡುತ್ತಿಲ್ಲ. ಆದರೆ ಭಕ್ತರಿಗೆ ವಸತಿಗೃಹ ಒದಗಿಸಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.