ADVERTISEMENT

ಬಿಎಸ್‌ವೈ ರಾಜಕೀಯ ಸಲಹೆಗಾರರಾಗಿದ್ದ ಮರಮಕಲ್ ನೇಮಕ ರದ್ದು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 18:22 IST
Last Updated 14 ನವೆಂಬರ್ 2020, 18:22 IST
ಎಂ.ಬಿ.ಮರಮಕಲ್‌
ಎಂ.ಬಿ.ಮರಮಕಲ್‌    

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ರಾಜಕೀಯ ಸಲಹೆಗಾರರಾಗಿದ್ದ ಎಂ.ಬಿ.ಮರಮಕಲ್‌ ಅವರ ನೇಮಕಾತಿ ಆದೇಶವನ್ನು ರದ್ದುಪಡಿಸಲಾಗಿದೆ.

2019ರ ಅಕ್ಟೋಬರ್‌ನಲ್ಲಿ ಮರಮಕಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತಲ್ಲದೇ, ರಾಜ್ಯ ಸಚಿವ ಶ್ರೇಣಿಯ ಸ್ಥಾನ ಹಾಗೂ ಸೌಲಭ್ಯವನ್ನೂ ನೀಡಲಾಗಿತ್ತು. ಇದೇ 13ರಿಂದ ಅನ್ವಯವಾಗುವಂತೆ ನೇಮಕಾತಿ ಆದೇಶ ರದ್ದು ಮಾಡಲಾಗಿದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಪತ್ರಕರ್ತರಾಗಿ ನಿವೃತ್ತರಾಗಿದ್ದ ಮರಮಕಲ್ ಅವರು, ಬಳಿಕ ಯಡಿಯೂರಪ್ಪನವರ ಜತೆ ಗುರುತಿಸಿಕೊಂಡಿದ್ದರು. ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌–ಜೆಡಿಎಸ್ ಶಾಸಕರನ್ನು ಸೆಳೆಯುವಲ್ಲಿ ಮರಮಕಲ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಜೆಡಿಎಸ್ ಶಾಸಕರು ದೂರಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಮರಮಕಲ್ ಅವರನ್ನು ರಾಜಕೀಯ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು.

ADVERTISEMENT

ಬಿ.ವೈ.ವಿಜಯೇಂದ್ರ ಸೂಚನೆಯ ಮೇರೆಗೆ, ನಾಲ್ಕೈದು ತಿಂಗಳಿನಿಂದೀಚೆಗೆ ಮರಮಕಲ್ ಅವರನ್ನು ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿ, ಗೃಹ ಕಚೇರಿ ಕೃಷ್ಣದಿಂದ ದೂರ ಇಡಲಾಗಿತ್ತು. ವಿಧಾನಸೌಧದ ಕಚೇರಿಗೆ ಅವರನ್ನು ಸೀಮಿತಗೊಳಿಸಲಾಗಿತ್ತು ಎಂಬ ಮಾತುಗಳೂ ಸಚಿವಾಲಯದ ವಲಯದಲ್ಲಿ ಹರಿದಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.