ADVERTISEMENT

ಅನುಕಂಪ ನೌಕರಿ; ವಿವಾಹಿತ ಪುತ್ರಿ ಅರ್ಹಳಲ್ಲ- ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2023, 16:23 IST
Last Updated 4 ಅಕ್ಟೋಬರ್ 2023, 16:23 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ‘ಅನುಕಂಪದ ಆಧಾರದಡಿ ಕೋರಲಾಗುವ ಉದ್ಯೋಗಕ್ಕೆ ವಿವಾಹಿತ ಪುತ್ರಿಯೂ ಅರ್ಹಳು‘ ಎಂಬ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್‌, ಈ ಸಂಬಂಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ಈ ಕುರಿತಂತೆ ಆದೇಶಿಸಿರುವ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಎಲ್‌ಐಸಿ ಉದ್ಯೋಗಿಯಾಗಿದ್ದ ತಂದೆಯ ನಿಧನದ ನಂತರ ಅರ್ಜಿದಾರರು ಉದ್ಯೋಗ ಕೋರಿದ್ದಾರೆ. ಆದರೆ, ತಂದೆಯ ನಿಧನಕ್ಕೆ ಹಲವು ವರ್ಷಗಳ ಮುನ್ನವೇ ಅರ್ಜಿದಾರ ಮಹಿಳೆ ಮದುವೆಯಾಗಿ ಪತಿಯ ಜತೆ ನೆಲೆಸಿದ್ದಾರೆ. ಹಾಗಾಗಿ ಹಕ್ಕು ಮಂಡಿಸಲಾಗದು‘ ಎಂದು ಹೇಳಿದೆ.

ADVERTISEMENT

‘ಒಂದು ವೇಳೆ ಮೃತರ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಬಹುದು. ಆದರೆ, ಈ ಪ್ರಕರಣದಲ್ಲಿ ಎಲ್‌ಐಸಿ ಮೃತರ ಕುಟುಂಬಕ್ಕೆ ₹ 1.58 ಕೋಟಿ ಪರಿಹಾರವನ್ನು ಪಾವತಿಸಿದೆ‘ ಎಂಬ ಅಂಶವನ್ನು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.