ADVERTISEMENT

ಮಸ್ಕಿ: ಹೆಚ್ಚಿದ ನೀರಿನ ತಾಪತ್ರಯ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 20:22 IST
Last Updated 11 ಜುಲೈ 2019, 20:22 IST
ರಾಯಚೂರು ಜಿಲ್ಲೆ ಮಸ್ಕಿ ‍ಪಟ್ಟಣದ ಬೋವಿ ಕಾಲೊನಿ ಜನರು ಟ್ಯಾಂಕರ್‌ ನೀರಿಗಾಗಿ ಸರದಿ ನಿಂತಿರುವ ದೃಶ್ಯ ಗುರುವಾರ ಕಂಡುಬಂತು
ರಾಯಚೂರು ಜಿಲ್ಲೆ ಮಸ್ಕಿ ‍ಪಟ್ಟಣದ ಬೋವಿ ಕಾಲೊನಿ ಜನರು ಟ್ಯಾಂಕರ್‌ ನೀರಿಗಾಗಿ ಸರದಿ ನಿಂತಿರುವ ದೃಶ್ಯ ಗುರುವಾರ ಕಂಡುಬಂತು   

ರಾಯಚೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಪ್ರತಾಪಗೌಡ ಪಾಟೀಲ ಅವರು ಪ್ರತಿನಿಧಿಸುತ್ತಿರುವ ವಿಧಾನಸಭೆ ಕ್ಷೇತ್ರದ ಕೇಂದ್ರ ಸ್ಥಾನ ಮಸ್ಕಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ.

ತುಂಗಭದ್ರಾ ನದಿ ನೀರುಸೇವಿಸುತ್ತಿದ್ದ ಜನರಿಗೆ 15 ದಿನಗಳಿಂದ ಕೊಳವೆಬಾವಿಯ ನೀರನ್ನು ಶುದ್ಧೀಕರಿಸದೆ ಪೂರೈಸಲಾಗುತ್ತಿದೆ. ಕೊಳವೆಬಾವಿ ಸುಸ್ಥಿತಿಯಲ್ಲಿ ಇಲ್ಲದ ಬಡಾವಣೆಗಳಿಗೆ ಪಟ್ಟಣ ಪಂಚಾಯಿತಿಯಿಂದ ಟ್ಯಾಂಕರ್‌ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೂ ಜನರು ಕರೆ ಮಾಡಿ ಮನವಿ ಮಾಡಬೇಕಿದೆ. ಸಮಸ್ಯೆಗಳ ಬಗ್ಗೆ ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT