ADVERTISEMENT

212 ಎಂಬಿಬಿಎಸ್‌ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ಸಮ್ಮತಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 19:59 IST
Last Updated 10 ಸೆಪ್ಟೆಂಬರ್ 2019, 19:59 IST

ಬೆಂಗಳೂರು: ಸೀಟು ತಡೆಹಿಡಿಯುವ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇರೆಗೆ ತಡೆಹಿಡಿಯಲಾಗಿದ್ದ 212 ಎಂ.ಬಿ.ಬಿ.ಎಸ್‌ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಣೆಗೆ ಸರ್ಕಾರ ಅನುಮತಿ ನೀಡಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಕ್ಷಣ ಫಲಿತಾಂಶ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

2018–19ನೇ ಸಾಲಿನಲ್ಲಿ 212 ಪ್ರತಿಭಾವಂತ ವಿದ್ಯಾರ್ಥಿಗಳು ಮಾಪ್‌ ಅಪ್‌ ಸುತ್ತಿನ ಬಳಿಕ ತಮಗೆ ಲಭ್ಯವಾದ ಸೀಟುಗಳನ್ನು ನೇರವಾಗಿ ಕಾಲೇಜುಗಳಿಗೆ ಬಿಟ್ಟುಕೊಟ್ಟಿದ್ದರು ಇಲ್ಲವೇ ರದ್ದುಪಡಿಸಿದ್ದರು. ಹೀಗೆ ಖಾಲಿಯಾದ ಸೀಟುಗಳಿಗೆ ಕಾಲೇಜುಗಳು ಹೊಸದಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದವು. ಇದಕ್ಕೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಆಕ್ಷೇಪ ವ್ಯಕ್ತಪಡಿಸಿತ್ತು. ಸರ್ಕಾರದ ಸೂಚನೆಯ ಮೇರೆಗೆ ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಗಿತ್ತು. ಈಚೆಗೆ ಫಲಿತಾಂಶ ಪ್ರಕಟವಾದಾಗ ಸರ್ಕಾರದ ಸೂಚನೆ ಹೊರತುಈ 212 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ಆರ್‌ಜಿಯುಎಚ್‌ಎಸ್‌ ನಿರಾಕರಿಸಿತ್ತು.

ADVERTISEMENT

ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಪರೀಕ್ಷೆ: ಆಕ್ಷೇಪಣೆಗೆ ಅವಕಾಶ

ಬೆಂಗಳೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಸಿಇಟಿ ಅಂಕಗಳನ್ನು ಹೊರತುಪಡಿಸಿ ವೈಯಕ್ತಿಕ ಮಾಹಿತಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಇದ್ದಲ್ಲಿ ಇದೇ 16ರೊಳಗೆ ಸಲ್ಲಿಸಲು ಸೂಚಿಸಲಾಗಿದೆ.

ಒಟ್ಟು 10,611 ಖಾಲಿ ಹುದ್ದೆಗಳಿಗೆ 51,888 ಮಂದಿ ಪರೀಕ್ಷೆ ಬರೆದಿದ್ದರು.ಪರೀಕ್ಷೆಯ ಅಂಕ ವಿವರಗಳನ್ನು www.schooleducation.kar.nic.in ಇಲ್ಲಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.