ಮೈಸೂರು: ಮದ್ಯಪಾನದ ಬಳಿಕ ಉಂಟಾಗುವ ತಲೆಭಾರಕ್ಕೆ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಮದ್ದು ಕಂಡುಹಿಡಿದಿದೆ.
‘ಎ–ಹ್ಯಾಂಗೊ’ ಹೆಸರಿನ ಹುಡಿಯ ಸ್ವರೂಪದಲ್ಲಿರುವ ಈ ಔಷಧಿಸೇವಿಸಿದರೆ ಬೆಳಿಗ್ಗೆ ಎದ್ದಾಗ ಕಾಡುವ ಮದ್ಯ ಸೇವನೆಯಿಂದ ಉಂಟಾಗುವ ತಲೆಭಾರ ಮಾಯವಾಗಿರುತ್ತದೆ.
ಭಾರಿ ಬೇಡಿಕೆ: ಈ ಔಷಧ ತಂತ್ರಜ್ಞಾನಕ್ಕೆ ಈಗಾಗಲೇ ಭಾರಿ ಬೇಡಿಕೆ ಬಂದಿದೆ. ಬೆಂಗಳೂರಿನ ಔಷಧ ತಯಾರಿಕಾ ಸಂಸ್ಥೆಯೊಂದು ₹ 30 ಲಕ್ಷ ಪಾವತಿಸಿ ತಂತ್ರಜ್ಞಾನ ಖರೀದಿಸಿದೆ ಎಂದು ಸಂಸ್ಥೆಯಮುಖ್ಯ ವಿಜ್ಞಾನಿ ಡಾ.ಆರ್.ಸುಬ್ರಮಣಿಯನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.