ADVERTISEMENT

ಮೇಕೆದಾಟು: ಶಿವಕುಮಾರ್‌ ದೆಹಲಿಗೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 19:29 IST
Last Updated 18 ಡಿಸೆಂಬರ್ 2018, 19:29 IST

ಬೆಳಗಾವಿ: ಮೇಕೆದಾಟು ಯೋಜನೆಯ ಕುರಿತು ರಾಜ್ಯದ ಎಲ್ಲ ಸಂಸದರಿಗೆ ಸಮಗ್ರ ಮಾಹಿತಿ ನೀಡಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಬುಧವಾರ ದೆಹಲಿಗೆ ತೆರಳಲಿದ್ದಾರೆ.

ಸಂಸತ್‌ ಅಧಿವೇಶನ ನಡೆಯುತ್ತಿರುವ ಈ ವೇಳೆಯಲ್ಲಿ ಕಲಾಪದಲ್ಲಿ ಚರ್ಚೆಗೆ ಅನುವಾಗುವಂತೆ ಸಂಸದರಿಗೆ ದಾಖಲೆ ಸಮೇತ ಮಾಹಿತಿ ನೀಡುವುದು ಅವರ ಉದ್ದೇಶ.

ಸಂಸತ್‌ನಲ್ಲಿ ತಮಿಳುನಾಡು ಸಂಸದರು ಈ ವಿಷಯ ಪ್ರಸ್ತಾಪಿಸಿದಾಗ, ರಾಜ್ಯದ ಪರ ವಕಾಲತ್ತು ವಹಿಸಬೇಕು. ನೀರು–ನೆಲದ ವಿಷಯದಲ್ಲಿ ತಮಿಳುನಾಡು ಪ್ರತಿನಿಧಿಗಳು ಪಕ್ಷಭೇದ ಮರೆತು ತೋರುತ್ತಿರುವ ಕಾಳಜಿಯ ಮಾದರಿಯಲ್ಲಿ ನಮ್ಮವರು ನಡೆದುಕೊಳ್ಳಬೇಕು. ಆಗ ಮಾತ್ರ ರಾಜ್ಯದ ಹಿತ ಕಾಪಾಡಲು ಸಾಧ್ಯ. ರಾಜ್ಯದ ಮಹತ್ವಾಕಾಂಕ್ಷೆ ಯೋಜನೆಯಾದ ಮೇಕೆದಾಟು ಅನುಷ್ಠಾನಕ್ಕೆ ಎಲ್ಲ ರೀತಿಯ ನೆರವು ನೀಡಬೇಕು ಎಂದು ಸಂಸದರಲ್ಲಿ ಮನವಿ ಮಾಡಲಿದ್ದಾರೆ.

ADVERTISEMENT

‘ಮೇಕೆದಾಟು ಯೋಜನೆಯ ಕುರಿತು ತಮಿಳುನಾಡಿನ ನಾಯಕರಿಗೆ ಮನವರಿಕೆ ಮಾಡಿಕೊಡಲು ಸಿದ್ಧರಿದ್ದೇವೆ. ಇದು ಕುಡಿಯುವ ನೀರಿಗಾಗಿನ ಯೋಜನೆ. ಇದರಿಂದ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಶಿವಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.