ADVERTISEMENT

ಕಾವೇರಿ 2.0 ತಂತ್ರಾಂಶ ಸುಸ್ಥಿತಿಗೆ: ಕೃಷ್ಣಬೈರೇಗೌಡ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 16:00 IST
Last Updated 5 ಫೆಬ್ರುವರಿ 2025, 16:00 IST
ಕೃಷ್ಣಬೈರೇಗೌಡ
ಕೃಷ್ಣಬೈರೇಗೌಡ   

ಬೆಂಗಳೂರು: ಕಳೆದ ಒಂದು ವಾರದಿಂದ ತಾಂತ್ರಿಕ ಸಮಸ್ಯೆಗೆ ತುತ್ತಾಗಿದ್ದ ಕಾವೇರಿ 2.0 ತಂತ್ರಾಂಶವನ್ನು ಸರಿಪಡಿಸಲಾಗಿದ್ದು, ತಂತ್ರಾಂಶವು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ತಾಂತ್ರಿಕ ಸಮಸ್ಯೆ ಕಾರಣಕ್ಕೆ ಆಸ್ತಿ ನೋಂದಣಿ ಪ್ರಕ್ರಿಯೆ ಮತ್ತು ಇಸಿ/ಸಿಸಿ ಸೇವೆಗಳ ಮೇಲೂ ಪರಿಣಾಮ ಉಂಟಾಗಿತ್ತು. ಇದರಿಂದ ಆದಾಯ ಸಂಗ್ರಹವೂ ಕಡಿಮೆ ಆಗಿತ್ತು. ಮುಂದೆ ಈ ರೀತಿಯ ತಾಂತ್ರಿಕ ಸಮಸ್ಯೆಗಳಿಂದ ಆಗಬಹುದಾದ ಆಪಾಯ ತಪ್ಪಿಸಲು ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.1 ರಂದು ತಾಂತ್ರಿಕ ಸಮಸ್ಯೆ ಕಾರಣ ನೋಂದಣಿಗಳ ಪ್ರಮಾಣ 556 ಇಳಿದಿತ್ತು. ಇಸಿ (ಋಣಭಾರ ಪ್ರಮಾಣ ಪತ್ರ)1,649 ಮತ್ತು ಸಿಸಿ (ದೃಢೀಕರಣ ಪತ್ರ) 405 ನೀಡಲಾಗಿದ್ದು, ₹15.19 ಕೋಟಿ ಸಂಗ್ರಹ ಆಗಿತ್ತು. ಫೆ.3 ರಂದು ತುರ್ತುಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಸ್ವಲ್ಪ ಮಟ್ಟಿನ ಸುಧಾರಣೆ ಆದರೂ, ಫೆ.4 ರಂದು ಮತ್ತೊಮ್ಮೆ ಕಡಿಮೆ ಆಗಲಾರಂಭಿಸಿತು. ಫೆ.5 ರಂದು 7,225 ನೋಂದಣಿಗಳಾಗಿದ್ದು ₹62.59 ಕೋಟಿ ಸಂಗ್ರಹ ಆಗಿದೆ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.