ADVERTISEMENT

ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ 80–90 ಶಾಸಕರು: ಶಾಸಕ ಇಕ್ಬಾಲ್ ಹುಸೇನ್‌

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 14:36 IST
Last Updated 9 ಫೆಬ್ರುವರಿ 2026, 14:36 IST
ಇಕ್ಬಾಲ್‌ ಹುಸೇನ್‌
ಇಕ್ಬಾಲ್‌ ಹುಸೇನ್‌   

ಬೆಂಗಳೂರು: ‘ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೂ ಅವಕಾಶ ಮಾಡಿ ಕೊಡಬೇಕು. ಈ ಅವಧಿಯಲ್ಲೇ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು 80–90 ಶಾಸಕರು ಬಯಸಿದ್ದೇವೆ’ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ದೇವರಾಜ ಅರಸು ಬಳಿಕ ದಲಿತರ ಪರವಾಗಿ, ಶೋಷಿತರ ಪರವಾಗಿ ಸಿದ್ದರಾಮಯ್ಯ ಅಳಿಲು ಸೇವೆ ಮಾಡಿದ್ದಾರೆ. ಎರಡೂವರೆ ವರ್ಷ ಆದ ಮೇಲೆ ಸಾಕಷ್ಟು ಶಾಸಕರು ಒಬ್ಬ ನಿಷ್ಠಾವಂತ, ಪಕ್ಷನಿಷ್ಠ ವ್ಯಕ್ತಿ ಬರಬೇಕೆಂದು ಡಿ.ಕೆ.ಶಿವಕುಮಾರ್ ಪರವಾಗಿ ಮಾತನಾಡಿದ್ದೇವೆ’ ಎಂದರು.

‘ಅವರಿಗೆ ಅವಕಾಶ ಕೊಡಬೇಕು ಎಂದು 80ರಿಂದ 90 ಶಾಸಕರು ಆಶಯ ಪಡುತ್ತಿದ್ದೇವೆ. ಸಾಮಾಜಿಕ ‌ನ್ಯಾಯ ಎಂದು ಹೇಳುತ್ತೀರಿ. ಸಾಮಾಜಿಕ ನ್ಯಾಯದಂತೆ ನಡೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ನಮ್ಮ ಪಕ್ಷ ಶಿಸ್ತಿನ ಪಕ್ಷ. ತಂದೆ ಪರವಾಗಿ ಈ ರೀತಿ ಪದೇ ಪದೇ ಮಾತನಾಡುವುದು ಅಸಹ್ಯ. ಬೇರೆ ನಾಯಕರು ಮಾತನಾಡಿದರೆ ಒಂದು ಬೆಲೆ ಇರುತ್ತದೆ. ಅವರು ನಮ್ಮನ್ನು ಪದೇ–ಪದೇ ಪ್ರಚೋದನೆ ಮಾಡಬಾರದು’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.