ADVERTISEMENT

ಕಳ್ಳರೇ ಪೊಲೀಸರಿಗೆ ನೋಟಿಸ್‌ ಕೊಟ್ಟಂತೆ: ಪಾಟೀಲ ಲೇವಡಿ

ರಾಜ್ಯ ಸರ್ಕಾರದ ವಿರುದ್ಧ ಶಾಸಕ ಎಂ.ಬಿ.ಪಾಟೀಲ ಲೇವಡಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 21:46 IST
Last Updated 3 ಆಗಸ್ಟ್ 2020, 21:46 IST
ಎಂ.ಬಿ.ಪಾಟೀಲ, ಶಾಸಕ
ಎಂ.ಬಿ.ಪಾಟೀಲ, ಶಾಸಕ   

ಹಾವೇರಿ: ‘ಕೋವಿಡ್‌ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಆರೋಪ ಮಾಡಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರಿಗೆ ಬಿಜೆಪಿ ಲೀಗಲ್‌ ನೋಟಿಸ್‌ ನೀಡಿರುವುದು ಕಳ್ಳರೇ ಪೊಲೀಸರಿಗೆ ನೋಟಿಸ್‌ ಕೊಟ್ಟಂತೆ’ ಎಂದು ಶಾಸಕ ಎಂ.ಬಿ.ಪಾಟೀಲ ಲೇವಡಿ ಮಾಡಿದರು.

ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್‌ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿರುವುದು ಬಿಜೆಪಿ ಸರ್ಕಾರದ ಸಂಸ್ಕಾರವಾಗಿದೆ. ಈ ಅವ್ಯವಹಾರದಲ್ಲಿ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು ಎಲ್ಲರೂ ಶಾಮೀಲಾಗಿದ್ದಾರೆ. ತಪ್ಪು ಮಾಡಿಲ್ಲ ಎಂಬ ವಿಶ್ವಾಸವಿದ್ದರೆ ತನಿಖೆಗೆ ಏಕೆ ಹಿಂದೇಟು ಹಾಕುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ರಿಸರ್ವ್‌ ಬ್ಯಾಂಕ್‌ನಿಂದ ₹8 ಸಾವಿರ ಕೋಟಿ ಸಾಲ ಮಾಡುವ ಮೂಲಕ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ₹2 ಸಾವಿರ ಕೋಟಿಗೂ ಅಧಿಕ ಹಣವನ್ನು ಲೂಟಿ ಹೊಡೆದು, ರಾಜ್ಯದ ಘನತೆಯನ್ನು ಮಣ್ಣಪಾಲು ಮಾಡಿದ್ದಾರೆ. ನನಗೂ ಬೇಕಾದರೆ ನೋಟಿಸ್‌ ಕೊಡಲಿ. ತಕ್ಕ ಉತ್ತರ ಕೊಡುತ್ತೇನೆ’ ಎಂದು ಸವಾಲು ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.