ADVERTISEMENT

ಮಹಿಳೆಯೊಂದಿಗೆ ಶಾಸಕ ಆ‍ಪ್ತ ಮಾತು: ಹರಿದಾಡಿದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 23:44 IST
Last Updated 30 ಏಪ್ರಿಲ್ 2024, 23:44 IST
ಎಚ್‌.ಎ. ಇಕ್ಬಾಲ್ ಹುಸೇನ್, ರಾಮನಗರ ಶಾಸಕ
ಎಚ್‌.ಎ. ಇಕ್ಬಾಲ್ ಹುಸೇನ್, ರಾಮನಗರ ಶಾಸಕ   

ರಾಮನಗರ: ಕಾಂಗ್ರೆಸ್ ಶಾಸಕ ಎಚ್‌.ಎ.ಇಕ್ಬಾಲ್ ಹುಸೇನ್ ಅವರು ಮಹಿಳೆಯೊಬ್ಬರ ಜತೆಗಿನ ವಾಟ್ಸ್‌ಆ್ಯಪ್‌ ಕಾಲ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯೂ ಆಗಿರುವ ಮಹಿಳೆ ಜತೆ ಹುಸೇನ್ ಅವರು, ಆಪ್ತವಾಗಿ ಮಾತನಾಡುತ್ತಿರುವ 2 ನಿಮಿಷ 27 ಸೆಕೆಂಡ್‌ನ ವಿಡಿಯೊ ಚರ್ಚೆಗೆ ಗ್ರಾಸವಾಗಿದೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಆರೋಪದ ಪ್ರಕರಣ ದೊಡ್ಡ ಸುದ್ದಿಯಾಗಿರುವ ಬೆನ್ನಲ್ಲೇ ಶಾಸಕ ಹುಸೇನ್ ವಿಡಿಯೊ ಬಹಿರಂಗವಾಗಿದೆ. ಇದರೊಂದಿಗೆ ಜಿಲ್ಲೆಯ ವಿವಿಧ ರಾಜಕಾರಣಿಗಳ ಜತೆ ಮಹಿಳೆ ಕಾಣಿಸಿಕೊಂಡಿರುವ ಫೋಟೊಗಳು ಕೂಡ ಮೊಬೈಲ್‌ಗಳಲ್ಲಿ ಹರಿದಾಡುತ್ತಿವೆ.

ವಿಡಿಯೊ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹುಸೇನ್ ಅವರು, ‘ನಾನೇ ಮಾತನಾಡಿರುವ ವಿಡಿಯೊ ಇರಬಹುದು. ನಾನು ಗೆದ್ದಿರುವುದಕ್ಕೆ ಎದುರಾಳಿಗಳು ಈ ರೀತಿಯ ವಿಡಿಯೊ ಹರಿಬಿಟ್ಟಿದ್ದಾರೆ. ಇಂತಹವೆಲ್ಲಾ ಬರುತ್ತಿರುತ್ತವೆ. ಅದರಲ್ಲಿರುವ ಸತ್ಯಾಂಶವೇನು ಎಂದು ನೋಡುವೆ. ಪೊಲೀಸ್ ದೂರು ಸೇರಿದಂತೆ ಕಾನೂನು ಕ್ರಮ ಕುರಿತು ಇನ್ನೂ ನಿರ್ಧರಿಸಿಲ್ಲ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.