ADVERTISEMENT

ಅಂಗೀಕಾರವಾಗಬೇಕಾದರೆ ಶಾಸಕರ ರಾಜೀನಾಮೆ ಪತ್ರ ಹೇಗಿರಬೇಕು?

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 4:32 IST
Last Updated 10 ಜುಲೈ 2019, 4:32 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಾಸಕರು ನೀಡಿದ ರಾಜೀನಾಮೆ ಅಂಗೀಕಾರವಾಗಬೇಕಾದರೆ ಆ ಪತ್ರ ಹೇಗಿರಬೇಕು, ತಿರಸ್ಕೃತವಾದರೆ ಕಾರಣವೇನು ಎಂಬ ಕುತೂಹಲದ ಚರ್ಚೆ ಎಲ್ಲೆಡೆ ನಡೆದಿದೆ.

ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮಗಳು ಹೀಗೆ ಹೇಳುತ್ತವೆ. ಅದರ ಪ್ರಕಾರ ಸಭಾಧ್ಯಕ್ಷರು ರಾಜೀನಾಮೆ ತಿರಸ್ಕರಿಸಲು ಸಾಧ್ಯವಿಲ್ಲ. ಬದಲಿಗೆ, ತಪ್ಪು ಸರಿಪಡಿಸಿ ಮತ್ತೊಮ್ಮೆ ಪಡೆದುಕೊಳ್ಳಬಹುದು.

ರಾಜೀನಾಮೆ ಹೇಗಿರಬೇಕು

ADVERTISEMENT

*ಶಾಸಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದರೆ, ಸಭಾಧ್ಯಕ್ಷರನ್ನು ಉದ್ದೇಶಿಸಿ, ರಾಜೀನಾಮೆ ಕೊಡುವ ಇಚ್ಛೆಯನ್ನು ಪತ್ರದಲ್ಲಿ ತಿಳಿಸಬೇಕು. ರಾಜೀನಾಮೆ ಪತ್ರದಲ್ಲಿ ಕಾರಣ ನೀಡುವಂತಿಲ್ಲ.

*ಶಾಸಕ ರಾಜೀನಾಮೆ ಪತ್ರದಲ್ಲಿ ಕಾರಣ ಮತ್ತು ಸಂಬಂಧಪಡದ ವಿಷಯವನ್ನು ಕೊಡುವಂತಿಲ್ಲ.

*ರಾಜೀನಾಮೆ ಪತ್ರವನ್ನು ಸಭಾಧ್ಯಕ್ಷರಿಗೆ ಖುದ್ದಾಗಿ ನೀಡಿ, ರಾಜೀನಾಮೆಯನ್ನು ಸ್ವಂತ ಇಚ್ಛೆಯಿಂದ ನೀಡುತ್ತಿರುವುದಾಗಿ ಮತ್ತು ಅದು ನೈಜವಾದುದು ಎಂದು ತಿಳಿಸಬೇಕು. ಅದರಲ್ಲಿ ಯಾವುದೇ ಪ್ರತಿಕೂಲ ಮಾಹಿತಿ ಅಥವಾ ತಿಳಿವಳಿಕೆ ಇರದಿದ್ದರೆ ಮತ್ತು ಅವರಿಗೆ ರಾಜೀನಾಮೆ ಬಗ್ಗೆ ಸಮಾಧಾನವಾದರೆ, ಸಭಾಧ್ಯಕ್ಷರು ರಾಜೀನಾಮೆ ಅಂಗೀಕರಿಸಬಹುದು.

*ನಾನು...ದಿನಾಂಕದಿಂದ, ವಿಧಾನಸಭೆಯಲ್ಲಿನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಷ್ಟೇ ಬರೆಯಬೇಕು. ಅದನ್ನು ಕೈ ಬರಹದಲ್ಲೇ ಇರಬೇಕು. ಟೈಪ್‌ ಮಾಡಿ ಸಲ್ಲಿಸುವಂತಿಲ್ಲ.

ತಿರಸ್ಕರಿಸಲು ಕಾರಣಗಳು

* ಪತ್ರವನ್ನು ಸಭಾಧ್ಯಕ್ಷರಿಗೆ ಖುದ್ದಾಗಿ ನೀಡದೇ, ಅಂಚೆ ಅಥವಾ ಇತರರ ಮೂಲಕ ನೀಡಿದಾಗ, ಅದು ನಿಜವಾದುದೇ ಎಂಬುದನ್ನು ವಿಚಾರಣೆ ನಡೆಸಬಹುದು. ವಿಚಾರಣೆ ಬಳಿಕ ಸ್ವ ಇಚ್ಛೆಯಿಂದ ನೀಡಿದ್ದು ಅಲ್ಲ ಎಂಬುದು ಮನವರಿಕೆ ಆದರೆ ರಾಜೀನಾಮೆ ತಿರಸ್ಕರಿಸಬಹುದು.

*ಪತ್ರವನ್ನು ಸಭಾಧ್ಯಕ್ಷರು ಅಂಗೀಕರಿಸುವುದಕ್ಕೆ ಮುನ್ನಶಾಸಕ ಅದನ್ನು ಹಿಂದಕ್ಕೆ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.