ADVERTISEMENT

‘ಹೆಂಡ್ತಿ ಬಿಟ್ಟು ಓಡಿ ಹೋದ ಮೋದಿ ಭೇಟಿ ಬಚಾವೋ ಭೇಟಿ ಪಢಾವೋ ಎನ್ನುತ್ತಿದ್ದಾರೆ’

ರಸ್ತೆ, ಕಾಲೇಜು ಕಟ್ಟಿದ್ದು ಮೋದಿ ಅಪ್ಪನ: ಮಾರ್ಗರೇಟ್ ಆಳ್ವ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 16:26 IST
Last Updated 10 ಏಪ್ರಿಲ್ 2019, 16:26 IST
ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಮಾರ್ಗರೇಟ್ ಆಳ್ವ ಮಾತನಾಡಿದರು– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಮಾರ್ಗರೇಟ್ ಆಳ್ವ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಹೆಂಡ್ತಿ ಬಿಟ್ಟು ಓಡಿ ಹೋದ ಪ್ರಧಾನಿ ನರೇಂದ್ರ ಮೋದಿ ಪಾಪಾ ಆಕೆಗೆ ಜೀವನಕ್ಕೂ ಹಣವನ್ನೂ ನೀಡುತ್ತಿಲ್ಲ. ಜೀವನ ಸಾಗಿಸಲು ಆ ಹೆಣ್ಣು ಮಗಳು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ನಿಯನ್ನೇ ನೋಡಿಕೊಳ್ಳದ ಮೋದಿ ‘ಭೇಟಿ ಬಚಾವೋ ಭೇಟಿ ಪಢಾವೋ’ (ಹೆಣ್ಣು ಮಗು ರಕ್ಷಿಸಿ ವಿದ್ಯಾಭ್ಯಾಸ ನೀಡಿ) ಎನ್ನುತ್ತಿದ್ದಾರೆ’ ಎಂದು ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ವ್ಯಂಗ್ಯವಾಡಿದರು.

ಧಾರವಾಡ ಜಿಲ್ಲಾ ಮಹಿಳಾ ಸಮಾವೇಶದಲ್ಲಿ ಬುಧವಾರ ಮಾತನಾಡಿದ ಅವರು, ‘ಜಾಸ್ತಿ ಓದಿಲ್ಲದ ತಿಳಿವಳಿಕೆ ಇಲ್ಲದ ಮೋದಿ 60 ವರ್ಷದಲ್ಲಿ ಕಾಂಗ್ರೆಸ್ ಏನು ಕೆಲಸ ಮಾಡಿದೆ ಎಂದು ಕೇಳುತ್ತಾರೆ. ದೇಶದ ರಸ್ತೆ, ರೈಲು ಮಾರ್ಗ ನಿರ್ಮಾಣ ಮಾಡಿದ್ದು, ಐಐಟಿ, ಕಾಲೇಜುಗಳನ್ನು ಕಟ್ಟಿದ್ದು ಅವರ ಅಪ್ಪನ? ಅಕ್ಷರಜ್ಞಾನ ಇಲ್ಲದ ಅವರು ಈ ದೇಶದ ಇತಿಹಾಸವನ್ನು ಓದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಈ ದೇಶದಲ್ಲಿ ಯಾವುದೇ ವಸ್ತುಗಳು ತಯಾರಾಗುತ್ತಿರಲಿಲ್ಲ. ಆದರೆ ಈಗ ವಿಮಾನ ಸಹ ತಯಾರಾಗುತ್ತದೆ. ಇದು ಕಾಂಗ್ರೆಸ್ ಮಾಡಿದ ಕೆಲಸ. ಗಾಂಧಿ ಪರಿವಾರದ ಹೆಸರು ಕೇಳಿದರೆ ಹೆದರುವ ಮೋದಿ, ಇನ್ನು 1000 ವರ್ಷವಾದರೂ ಇಷ್ಟು ಕೆಲಸ ಮಾಡಲು ಆಗದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.