ADVERTISEMENT

ಲಾಕ್‌ಡೌನ್ | ಮದ್ಯ ಖರೀದಿಸಲು ಆಂಧ್ರದಿಂದ ಬಂದರು!

​ಪ್ರಜಾವಾಣಿ ವಾರ್ತೆ
Published 4 ಮೇ 2020, 19:46 IST
Last Updated 4 ಮೇ 2020, 19:46 IST
   

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಸೋಮವಾರ ಮದ್ಯ ಮಾರಾಟ ಆರಂಭವಾಗಿದ್ದು, ನೆರೆಯ ಆಂಧ್ರದಿಂದಲೂ ನೂರಾರು ಜನ ದ್ವಿಚಕ್ರ ವಾಹನಗಳಲ್ಲಿ ಮದ್ಯ ಖರೀದಿಸಲು ಬಂದ ಕಾರಣ ಗೊಂದಲ ಉಂಟಾಯಿತು.

‘ಆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿವೆ, ಇಲ್ಲೂ ಹರಡಬಹುದು’ ಎಂದು ಸ್ಥಳೀಯರು ದೂರಿದರು. ಪೊಲೀಸರು ಸ್ಥಳಕ್ಕೆ ಬಂದು ಕೆಲ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದರು.

‘ಆಧಾರ್ ಕಾರ್ಡ್ ತೋರಿಸಿ ಮದ್ಯ ಪಡೆಯಬೇಕು. ಆಂಧ್ರಪ್ರದೇಶದ ಕಾರ್ಡ್ ತಂದಲ್ಲಿ ಮದ್ಯ ನೀಡುವುದಿಲ್ಲ’ ಎಂದು ಅಬಕಾರಿ ಇಲಾಖೆಯ ನಿರೀಕ್ಷಕಿ ಕೀರ್ತನಾ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.