ADVERTISEMENT

13 ದಿನಗಳಲ್ಲಿ 5 ಮಂಗಗಳ ಸಾವು: ಮಂಗನ ಕಾಯಿಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 20:15 IST
Last Updated 13 ಜನವರಿ 2019, 20:15 IST

ಹೊನ್ನಾವರ (ಉತ್ತರ ಕನ್ನಡ): ತಾಲ್ಲೂಕಿನ ಸಾಲ್ಕೋಡ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ 13 ದಿನಗಳಲ್ಲಿ ಒಟ್ಟು ಐದು ಸತ್ತ ಮಂಗಗಳ ಶವ ಪತ್ತೆಯಾಗಿವೆ.

‘ಸಾಲ್ಕೋಡ ಗ್ರಾಮದ ವ್ಯಾಪ್ತಿಯ ಕಾನಕ್ಕಿ, ಕಾನಕ್ಕಿ ಬೇಣ ಹಾಗೂ ಕರಿಕಾಲಮ್ಮ ದೇವಸ್ಥಾನದ ಸಮೀಪದಲ್ಲಿ ಸತ್ತ ಮಂಗಗಳು ಕಂಡು ಬಂದಿದ್ದು, ಇವು ಕ್ಯಾಸನೂರ್ ಕಾಯಿಲೆಯಿಂದ ಮೃತಪಟ್ಟಿರುವ ಶಂಕೆಯಿದೆ’ ಎಂದು ಕೆಎಫ್‌ಡಿ ವೈದ್ಯಾಧಿಕಾರಿ ಸತೀಶ ಶೇಟ್ ತಿಳಿಸಿದ್ದಾರೆ.

‘ಸಾಲ್ಕೋಡ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ತಿಂಗಳು ಸತ್ತಿದ್ದ ಮಂಗವೊಂದರ ರಕ್ತದ ಮಾದರಿಯ ಪರೀಕ್ಷಾ ವರದಿ ಬಂದಿದ್ದು, ಅದು ಕ್ಯಾಸ್‌ನೂರ್‌ ಕಾಯಿಲೆಯಿಂದ ಸತ್ತಿರುವುದು ಖಚಿತವಾಗಿದೆ. ಸತ್ತ ಮಂಗಗಳನ್ನು ಸುಟ್ಟು ಸುತ್ತಮುತ್ತಲ ಜಾಗದಲ್ಲಿ ರೋಗ ನಿಯಂತ್ರಕ ದ್ರಾವಣ ಸಿಂಪಡಿಸಲಾಗಿದೆ. ತಾಲ್ಲೂಕಿನ ಉಳಿದೆಡೆ ಮಂಗ ಸತ್ತಿರುವ ವರದಿಯಾಗಿಲ್ಲ. ಜನರಿಗೆ ಮಂಗನ ಕಾಯಿಲೆ ಬಂದ ಪ್ರಕರಣ ದಾಖಲಾಗಿಲ್ಲ. ರೋಗ ಹರಡದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಜನರು ವಿನಾಕಾರಣ ಆತಂಕಕ್ಕೆ ಒಳಗಾಗಬಾರದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.